ಉಪ್ಪಳ: ಮುಳಿಂಜ ಜಿ.ಎಲ್.ಪಿ ಶಾಲೆಯಲ್ಲಿ ಸೋಮವಾರ ನಡೆದ ಅರೆಬಿಕ್ ಭಾಷಾ ದಿನಾಚರಣೆಯನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ರಹಿಮಾನ್ ಟಿ ಉದ್ಘಾಟಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಹನಾಫಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಅರೆಬಿಕ್ ಶಿಕ್ಷಕ ರಿಯಾಜ್ ಪೆರಿಂಗಡಿ ಅವರ ನೇತೃತ್ವದಲಿ ಕಾರ್ಯಕ್ರಮ ನಡೆಯಿತು. ಅವರು ತಂತ್ರಜ್ಞಾನದ ಮೂಲಕ ವೀಡಿಯೋ ಪ್ರದರ್ಶಿಸಿ ಅರೆಬಿಕ್ ಭಾಷೆಯ ಬಗ್ಗೆ ಮಾಹಿತಿ ನೀಡಿದರು.
ಅರೆಬಿಕ್ ಭಾಷೆಯಲ್ಲಿ ಶಾಲಾ ಅಸೆಂಬ್ಲಿಯನ್ನು ಗಣ್ಯರ ಉಪಸ್ಥಿತಿಯಲ್ಲಿ ನಡೆಸಲಾಯಿತು. ಮಕ್ಕಳು ಹಸ್ತ ಪ್ರತಿ ತಯಾರಿಸಿದರು. ಜೊತೆಗೆ ಶುಭಾಶಯ ಕೋರುವ ಅಂಚೆಕಾರ್ಡ್ ಬರೆಸಲಾಯಿತು. ವಿದ್ಯಾರ್ಥಿಗಳು ಅರೆಬಿಕ್ ಭಾಷೆಯಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಿಕೊಟ್ಟರು ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ, ಧನ್ಯ ಪಿ.ವಿ ವಂದಿಸಿದರು. ಅಬ್ದುಲ್ ಬಶೀರ್ ಸುಬ್ಬಯ್ಯಕಟ್ಟೆ ನಿರ್ವಹಿಸಿದರು.

.jpg)

