ಪೆರ್ಲ : ಬಜಕೂಡ್ಲು ಏರೋಟಿ ಶ್ರೀ ಧೂಮಾವತೀ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀಧೂಮಾವತೀ ಮತ್ತು ಪರಿವಾರ ದೈವಗಳ ನೇಮ ಡಿ. 21ಹಾಗೂ 22ರಂದು ಜರುಗಲಿದೆ. 21ರಂದು ಸಂಜೆ 7ಕ್ಕೆ ಶ್ರೀ ಧೂಮಾವತೀ ದೈವದ ಭಂಡಾರ ತೆಗೆಯುವುದು, 7.30ಕ್ಕೆ ಭಜನೆ, ರಾತ್ರಿ 8.30ಕ್ಕೆ ಪರಿವಾರ ದೈವಗಳ ನೇಮ ನಡೆಯುವುದು.
22ರಂದು ಬೆಳಗ್ಗೆ 11ಕ್ಕೆ ಭಜನೆ, 12.30ಕ್ಕೆ ಶ್ರೀ ಧೂಮಾವತೀ ದೈವದ ನೇಮ, ಸಂಜೆ 4ಕ್ಕೆ ಬಜಕೂಡ್ಲು ಬಯಲಿನ ಪುರಿನಾಗಬನದಲ್ಲಿ ತಂಬಿಲಸೇವೆ, ರಾತ್ರಿ 8ಕ್ಕೆ ಗುಳಿಗಸ್ಥಾನದಲ್ಲಿ ಶ್ರೀಗುಳಿಗ ದೈವದ ಕೋಲ ನಡೆಯುವುದು.

