ಮಂಜೇಶ್ವರ: ಸೌಹಾರ್ದವೇ ಶಾಂತಿಗೆ ದಾರಿ.
ಶಾಂತಿ ಬೇಕೆಂದಾದರೆ ಸೌಹಾರ್ದ ಆಥವಾ ಬಂಧುತ್ವ ಅತ್ಗಗತ್ಯ ಎಂದು ಅತೀ ವಂದನೀಯ ಸ್ವಾಮಿ ಬಾಸಿಲ್ ವಾಸ್ ಕರೆ ನೀಡಿದರು.
ವರ್ಕಾಡಿಯಲ್ಲಿ ನಡೆದ ಕ್ರಿಸ್ಮಸ್ ಸೌಹಾರ್ದಕೂಟ ಹಾಗೂ ಸೌಹಾರ್ದ ಕ್ರಿಕೆಟ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವರ್ಕಾಡಿಯಲ್ಲಿ ವರ್ಕಾಡಿ ಇಗರ್ಜಿ,ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ಕಳಿಯೂರು, ಕಾಪೇರಿ ಎಯುಪಿ ಶಾಲೆ, ಸೈಂಟ್ ಮೇರಿಸ್ ಸಿಬಿಎಸ್ ಸಿ ಶಾಲೆ ಮತ್ತು ಅಂತರ ಧರ್ಮೀಯ ಅಯೋಗ ವರ್ಕಾಡಿ ಇಗರ್ಜಿಇವುಗಳ ಜಂಟಿ ಆಶ್ರಯದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಣೆಗೈದ ಮಂಗಳೂರು ವಿಶ್ವ ವಿದ್ಯಾಲಯದ ಕ್ರೈಸ್ತವಿದ್ಯಾಪೀಠದ ಮುಖ್ಯಸ್ಥ ವಂದನೀಯ ಐವನ್ ಡಿಸೋಜರು ಸಹೋದರ ಎಂಬ ಪದವನ್ನು ವಿವರಿಸುತ್ತಾ ಸೌಹಾರ್ದ ಎಂದರೆ ಎಲ್ಲರನ್ನೂ ಸಹೋದರ ಸಹೋದರಿಯರಂತೆ ಗುರುತಿಸುವುದದು.ಇಂತಹ ಭ್ರಾತ್ವದ ಸಮಾಜ ಕಟ್ಟುವ ಎಂದರು.ಆತಿಥಿಗಳಾದ ಕ.ಸಾ.ಪ. ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷರಾದ ಡಾ.ಜಯಪ್ರಕಾಶ ತೊಟ್ಟೆತೋಡಿ ಯವರು ಸೌಹಾರ್ದದಿಂದ ಎಲ್ಲರನ್ನೂ ಒಳಗೊಂಡ ಭರತದ ಮಕ್ಕಳಾಗೋಣ ಎಂದರು.
ಅತಿಥಿಗಳಾಗಿ ಆಗಮಿಸಿದ ಬಂಟ್ವಾಳದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ, ಲೇಖಕ ರಜಾಕ್ ಅನಂತಾಡಿಯವರು ಕ್ರೈಸ್ತ ಧರ್ಮದ ಸೇವೆ, ಶಿಕ್ಷಣ ನಿಜವಾದ ಶಾಂತಿ ಸೌಹಾರ್ಧದ ಸಮಾಜ ಕಟ್ಟಲು ಉಪಯುಕ್ತ ಎಂದರು.ಕರ್ನಾಟಕದ ಸರ್ಕಾರದ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ ಕಾರ್ಯಕ್ರಮ ಆಯೋಜಿಸಿದ ಎಲ್ಲರನ್ನು ಅಭಿನಂದಿಸಿದರು.
ಸಹಾಯಕ ಗುರುಗಳಾದ ವ.ಸಂತೋಷ್ ಡಿ ಸೋಜ, ಪಾಲನಾ ಪರಿಷತ್ ಉಪಾದ್ಯಕ್ಷ ರಾಜೇಶ್ ಡಿ ಸೋಜ , ಎರಡೂ ಕಾನ್ವಂಟ್ಗಳ ಮುಖ್ಯಸ್ಥರಾದ ಸಿ. ಶಾಂತಿ ಹಾಗೂ ಸಿ.ಮೊಂತಿನ್ ಗೋಮ್ಸ್,ಕಥೋಲಿಕ ಸಭೆ ಅಧ್ಯಕ್ಷರಾದ ಅಶೋಕ್ ಡಿ ಸೋಜ, ಸೌಹಾರ್ಧ ಸಮಿತಿ ಅದ್ಯಕ್ಷ ಯೇಸು ಪ್ರಸಾದ್ , ಕಳುಯೂರು ಮತ್ತು ಕಾಪೀರಿ ಶಾಲೆಗಳ ಮುಖ್ಯೋಪಾಧ್ಯಾಯರು ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಸಂಧ್ಯಾ ಡಿಸೋಜ ಸ್ವಾಗತಿಸಿ, ಅನಿತಾ ಡಿಸೋಜ ವಂದಿಸಿದರು. ಬಳಿಕ ಸೌಹಾರ್ಧ ಕ್ರಿಕೆಟ್ ಪಂದ್ಯಾಟ ನಡೆದವು.




