HEALTH TIPS

ಪೆರ್ಲ ಕೃಷ್ಣ ಭಟ್ಟರ ನೂರರ ನೆನಪು-ಮೂಡಂಬೈಲು ಶಾಸ್ತ್ರಿಗಳಿಗೆ ಗೌರವಾಭಿನಂದನೆ

ಪೆರ್ಲ: ಅಧ್ಯಾಪಕ, ಅರ್ಥಧಾರಿ, ವಿದ್ವಾಂಸ, ಹಿಂದಿಪಂಡಿತ, ಲೇಖಕರಾಗಿದ್ದ ಬಹುಮುಖ ಸಾಧಕ ದಿ.  ಪೆರ್ಲ ಕೃಷ್ಣ ಭಟ್ಟರ ನೂರರ ನೆನಪು ಕಾರ್ಯಕ್ರಮ ಪೆರ್ಲದ ಭಾರತಿ ಸದನದಲ್ಲಿ ಭಾನುವಾರ ಜರಗಿತು. 

ಪೆರ್ಲ ಕೃಷ್ಣ ಭಟ್ಟ ಸಾಂಸ್ಕøತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶಾಂಭಟ್ ಅಧ್ಯಕ್ಷತೆ ವಹಿಸಿದ್ದರು. ಆರ್.ಎಸ್.ಎಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ಟರು ಸಂಸ್ಮರಣಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಅರ್ಥದಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ಕೃಷ್ಣ ಭಟ್ಡರ ಶತಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಎಂ.ಪ್ರಭಾಕರ ಜೋಷಿ ಅಭಿನಂದನಾ ಭಾಷಣ ಮಾಡಿದರು. ಕೊಲ್ಲೂರು ದೇವಳದ ಮಾಜಿ ಆಡಳಿತ ಮೊಕ್ತೇಸರ ಕೃಷ್ಣ ಪ್ರಸಾದ ಅಡ್ಯಂತಾಯ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಕಾರ್ಯದರ್ಶಿ ರಾಜಾರಾಮ ಕು.ಅನುಕ್ತ ಪ್ರಾರ್ಥನೆ ಹಾಡಿದರು. ಸ್ವಾಗತಿಸಿ ಡಾ.ಶ್ರೀಪತಿ ಕಜಂಪಾಡಿ ವಂದಿಸಿದರು. ನಿವೃತ್ತ ಶಿಕ್ಷಕ ರಾಜೇಂದ್ರ ಬಜಕೂಡ್ಳು ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries