ಕೊಚ್ಚಿ: ಹತ್ತು ದಿನಗಳೊಳಗೆ ಸಾರ್ವಜನಿಕ ಸ್ಥಳಗಳಲ್ಲಿರುವ ಫ್ಲಕ್ಸ್ ಬೋರ್ಡ್ ಹಾಗೂ ಧ್ವಜಸ್ತಂಭಗಳನ್ನು ತೆರವು ಮಾಡದಿದ್ದಲ್ಲಿ ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿಗಳಿಗೆ ದಂಡ ವಿಧಿಸಲಾಗುವುದು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಸಂಬಂಧಪಟ್ಟ ಇಲಾಖೆಯ ಪ್ರಧಾನ ಕಾರ್ಯದರ್ಶಿ ನ್ಯಾಯಾಲಯಕ್ಕೆ ಹಾಜರಾಗಿ ಆದೇಶ ಜಾರಿ ಕುರಿತು ಮಾಹಿತಿ ನೀಡಬೇಕು ಎಂದೂ ಹೈಕೋರ್ಟ್ ಸೂಚಿಸಿದೆ. ಹಲವು ಬಾರಿ ಇಂತಹ ಆದೇಶ ಹೊರಡಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಇದೀಗ ನ್ಯಾಯಾಲಯ ಕಟ್ಟುನಿಟ್ಟಿನ ನಿಲುವು ತಳೆದಿದೆ. ಬೋರ್ಡ್‍ಗಳನ್ನು ತೆಗೆದುಹಾಕಲು ಸ್ಥಳೀಯ ಸಂಸ್ಥೆಗಳು ಸ್ಕ್ವಾಡ್‍ಗಳು ಮತ್ತು ಕ್ಷೇತ್ರ ಸಿಬ್ಬಂದಿಯನ್ನು ನಿಯೋಜಿಸಬಹುದು. ಬೆದರಿಕೆ ಇದ್ದರೆ, ಪೋಲೀಸ್ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು.
ಅಧಿಕಾರಿಗಳು ರಾಜಕೀಯ ಪಕ್ಷಗಳಿಗೆ ಹೆದರುತ್ತಾರೆ. ರಸ್ತೆ ಬದಿಗಳಲ್ಲಿಯೂ ಬೋರ್ಡ್‍ಗಳು ಮತ್ತು ಧ್ವಜಸ್ತಂಭಗಳಿವೆ. ಅಧಿಕಾರಿಗಳು ಧ್ವಜ ಮುಟ್ಟಿದರೆ ಗಂಭೀರ ವಿಷಯಗಳಾಗುತ್ತದೆ ಎಂಬಂತಾಗಿದೆ. ಸಿನಿಮಾಗಳು ಮತ್ತು ಧಾರ್ಮಿಕ ಸಂಸ್ಥೆಗಳ ಪೋಸ್ಟರ್‍ಗಳನ್ನೂ ಈ ರೀತಿ ಹಾಕಲಾಗುತ್ತಿದೆ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಗಮನ ಸೆಳೆದರು.



