ಪುತ್ತೂರು: ಮುಕ್ರಂಪಾಡಿಯಲ್ಲಿರುವ ನಂದಿವನದ ಗೃಹಪ್ರವೇಶೋತ್ಸವದ ಸಂದರ್ಭದಲ್ಲಿ ಶ್ರೀರಾಮ ಪಟ್ಟಾಭಿμÉೀಕದ ಕಥೆಯ ಸಾರವನ್ನು ಒಳಗೊಂಡಿರುವ ವೈಷ್ಣವೀ ನಾಟ್ಯಾಲಯದ ನೂತನ ನೃತ್ಯ ರೂಪಕ 'ಶ್ರೀರಾಮ ಪುನರಾಗಮನ' ಯಶಸ್ವಿ ಪ್ರದರ್ಶನದೊಂದಿಗೆ ಪ್ರೇಕ್ಷಕರ ಮನಸೂರೆಗೊಂಡಿತು. ನೃತ್ಯರೂಪಕದ ಸಾಹಿತ್ಯ ರಚನೆ ಡಾ. ರಾಜೇಶ್ ಬೆಜ್ಜಂಗಳ ನಿರ್ವಹಿಸಿದ್ದರು. ನೃತ್ಯ ನಿರ್ದೇಶನ ವಿದುಷಿ ಯೋಗೀಶ್ವರಿ ಜಯಪ್ರಕಾಶ್, ರಾಗ ಸಂಯೋಜನೆ ಮತ್ತು ಹಾಡುಗಾರಿಕೆಯಲ್ಲಿ ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್ ಹಾಗೂ ವಸಂತಕುಮಾರ್ ಗೋಸಾಡ, ಮೃದಂಗದಲ್ಲಿ ವಿದ್ವಾನ್ ಸುರೇಶ್ ಬಾಬು ಕಣ್ಣೂರು, ಕೊಳಲಿನಲ್ಲಿ ವಿದ್ವಾನ್ ರಾಹುಲ್ ಕಣ್ಣೂರು, ಕೀಬೋರ್ಡ್ ನಲ್ಲಿ ಬಾಬಣ್ಣ ಪುತ್ತೂರು, ರಿದಂನಲ್ಲಿ ಶಶಾಂಕ್ ಬಿ.ಸಿ ರೋಡ್, ಪ್ರಸಾಧನದಲ್ಲಿ ವಿಘ್ನೇಶ್ ವಿಶ್ವಕರ್ಮ ಭಾವನಾ ಕಲಾ ಆಟ್ರ್ಸ್ ಪುತ್ತೂರು ಸಹಕರಿಸಿದರು. ನಾರಾಯಣಿ ಅಮ್ಮ ಹಾಗೂ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟಿಸ್ ಪ್ರದೀಪ್ ಸಿಂಗ್ ಏರೂರ್ ರವರು ಕಲಾವಿದರನ್ನು ಗೌರವಿಸಿದರು.

.jpg)
