ಶಬರಿಮಲೆ: ಪುಲ್ಲುಮೇಡು, ಎರುಮೇಲಿ ಮೂಲಕ ಕಾನನ ಪಥವಾಗಿ ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಬರುವ ಯಾತ್ರಾರ್ಥಿಗಳಿಗೆ ಅಯ್ಯಪ್ಪನ ದರ್ಶನ ಪಡೆಯಲು ದೇವಸ್ವಂ ಮಂಡಳಿ ವಿಶೇಷ ವ್ಯವಸ್ಥೆ ಕಲ್ಪಿಸುತ್ತಿದೆ.
ಅರಣ್ಯ ಇಲಾಖೆ ಸಹಯೋಗದಲ್ಲಿ ಎರಡೂ ಮಾರ್ಗಗಳಲ್ಲಿ ಸಂಚರಿಸುವವರಿಗೆ ವಿಶೇಷ ಟ್ಯಾಗ್ ನೀಡಲಾಗುವುದು. ಪಂಬಾದಿಂದ ಸ್ವಾಮಿ ಅಯ್ಯಪ್ಪನ್ ರಸ್ತೆಯ ಮೂಲಕ ಸನ್ನಿಧಾನಕ್ಕೆ ಬರಬಹುದು. ನೀಲಿಮಲದ ಮೂಲಕ ಹೋಗಬಯಸುವವರು ಆ ದಾರಿಯಲ್ಲಿ ತೆರಳÀಬಹುದು. ಈ ಯಾತ್ರಾರ್ಥಿಗಳು ಮರಕೂಟ್ಟಂನಲ್ಲಿ ಸರÀಂಕುತ್ತಿ ಮಾರ್ಗವನ್ನು ತಪ್ಪಿಸಿ ಚಂದ್ರನಂದನ್ ರಸ್ತೆಯ ಮೂಲಕ ಸನ್ನಿಧಾನ ಪ್ರವೇಶಿಸಬಹುದು.
ಹೀಗಾಗಿ ಪುಲ್ಲುಮೇಡು ಮತ್ತು ಎರುಮೇಲಿಯಿಂದ ನಡು ಚಪ್ಪರಕ್ಕೆ ಆಗಮಿಸುವ ವಿಶೇಷ ಟ್ಯಾಗ್‍ಗಳನ್ನು ಧರಿಸಿರುವ ಯಾತ್ರಾರ್ಥಿಗಳಿಗೆ ಪ್ರತ್ಯೇಕ ಮಾರ್ಗವಿರುತ್ತದೆ. ಈ ಮೂಲಕ ಯಾತ್ರಾರ್ಥಿಗಳು ಸುಲಭವಾಗಿ ಭೇಟಿ ನೀಡಬಹುದಾಗಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ಹೊಸ ಸೌಲಭ್ಯ ಕಲ್ಪಿಸಲಾಗುತ್ತಿದೆ. ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.






