ಜರ್ಮನಿ: ಜರ್ಮನಿಯ ಕ್ರಿಸ್‌ಮಸ್ ಮಾರುಕಟ್ಟೆಯ ಮೇಲಿನ ದಾಳಿಯನ್ನು ಭಾರತ ಖಂಡಿಸಿ, ಭಯಾನಕ ಘಟನೆಯಾಗಿದೆ ಎಂದು ತಿಳಿಸಿದೆ.
ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಕ್ರಿಸ್ ಮಸ್ ಮಾರುಕಟ್ಟೆ ದಾಳಿ ವೇಳೆ ಕನಿಷ್ಠ ಐವರು ಮೃತಪಟ್ಟಿದ್ದು, ಸುಮಾರು 200 ಜನರು ಗಾಯಗೊಂಡಿದ್ದಾರೆ.
ದಾಳಿಯು ಭಯಾನಕ ಹಾಗೂ ಪ್ರಜ್ಞಾಶೂನ್ಯವಾಗಿದೆ. ಸಂತ್ರಸ್ತರಿಗೆ ನಾವು ಸಂತಾಪವನ್ನು ಸೂಚಿಸುತ್ತಿದ್ದೇವೆ ಎಂದಿದೆ.
ಘಟನೆಯ ವೇಳೆ ಗಾಯಗೊಂಡವರಲ್ಲಿ 7 ಭಾರತೀಯರು ಸೇರಿದ್ದಾರೆ. ಅವರೊಂದಿಗೆ ಜರ್ಮನಿಯಲ್ಲಿರುವ ರಾಯಭಾರಿ ಕಚೇರಿಯು ನಿರಂತರ ಸಂಪರ್ಕದಲ್ಲಿದೆ. ಸಾಧ್ಯವಿರುವ ಎಲ್ಲಾ ಸಹಾಯವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಘಟನೆಯೇನು?
ಜರ್ಮನ್ ನಗರದ ಮಗ್ ಡಿ ಬರ್ಗ್ ಪ್ರದೇಶದ ಕ್ರಿಸ್ ಮಸ್ ಮಾರುಕಟ್ಟೆಗೆ ವೇಗದಿಂದ ನುಗ್ಗಿದ ಕಾರ್ ಅಡಿಗೆ ಬಿದ್ದು ಐವರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಕಾರು ದಾಳಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಪ್ಪು ಬಣ್ಣದ ಕಾರ್ ಜನರ ದಟ್ಟಣೆ ಮಧ್ಯೆ, ಜನರನ್ನು ಚೆಲ್ಲಾಪಿಲ್ಲಿಯಾಗಿಸಿ, ಜನರ ಮೇಲೆಯೇ ದಾಳಿ ಮಾಡುತ್ತಾ ಅತಿವೇಗದಲ್ಲಿ ಹೋದ ದೃಶ್ಯ ವಿಡಿಯೋದಲ್ಲಿದೆ. ಘಟನೆಗೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿ ಈಗಾಗಲೇ ವಿಚಾರಣೆ ನಡೆಸುತ್ತಿದ್ದಾರೆ.




