HEALTH TIPS

'ಡಾ. ಅಂಬೇಡ್ಕರ್‌ ಸಮ್ಮಾನ ಸಪ್ತಾಹ' ಆಯೋಜಿಸಿದ ಕಾಂಗ್ರೆಸ್‌

ನವದೆಹಲಿ: ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಸಭೆಯಲ್ಲಿ ಆಡಿದ ಮಾತಿನ ವಿರುದ್ಧ ತನ್ನ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

'ಡಾ. ಅಂಬೇಡ್ಕರ್‌ ಸಮ್ಮಾನ ಸಪ್ತಾಹ'ವನ್ನಾಗಿ ಆಚರಿಸಲು ಪಕ್ಷ ಮುಂದಾಗಿದೆ.

1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದಿತ್ತು. ಈಗ ಈ ಅಧಿವೇಶನ ನಡೆದು ನೂರು ವರ್ಷ ತುಂಬಿದೆ. ಈ ಬಗ್ಗೆ ಡಿ.26ರಂದು ದೊಡ್ಡ ಮಟ್ಟದ ಕಾರ್ಯಕ್ರಮವನ್ನೂ ದೊಡ್ಡ ರ್‍ಯಾಲಿಯನ್ನೂ ಆಯೋಜಿಸಲು ಕಾಂಗ್ರೆಸ್‌ ನಿರ್ಧರಿಸಿದೆ' ಎಂದು ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಅವರು ಶನಿವಾರ ಪತ್ರಿಕಾಗೋಷ್ಠಿ ತಿಳಿಸಿದರು.

'ಈ ಬಳಿಕ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ಸಭೆಯೂ ನಡೆಯಲಿದ್ದು, ಪಕ್ಷದ ಮುಂದಿನ ಕಾರ್ಯಯೋಜನೆಗಳು ಏನಾಗಬೇಕು, ಅಮಿತ್‌ ಶಾ ಅವರ ಮಾತಿನ ಸಂಬಂಧ ಪಕ್ಷವು ಏನೆಲ್ಲಾ ಕಾರ್ಯತಂತ್ರಗಳನ್ನು ಕೈಗೊಳ್ಳಬೇಕು ಎನ್ನುವ ಕುರಿತು ಚರ್ಚೆ ನಡೆಯಲಿದೆ. ಪಕ್ಷದ ಮಟ್ಟಿಗೆ ಈ ಸಭೆಯು ಬಹಳ ಮುಖ್ಯವಾಗಿದೆ' ಎಂದು ಪವನ್‌ ಖೇರಾ ಮಾಹಿತಿ ನೀಡಿದರು.

ಸಪ್ತಾಹದಲ್ಲಿ ಏನಿರಲಿದೆ?

  • ಪಕ್ಷದ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಸಂಸದರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಡಿ. 22 ಹಾಗೂ 23ರಂದು ಅಮಿತ್‌ ಶಾ ಅವರ ರಾಜೀನಾಮೆಗೆ ಒತ್ತಾಯಿಸಿ ದೇಶದಾದ್ಯಂತ ಜಿಲ್ಲಾ ಮಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ

  • ಡಿ.24ರಂದು 'ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಮ್ಮಾನ್‌ ಮಾರ್ಚ್‌' ಆಯೋಜನೆ. ಜಿಲ್ಲಾ ಮಟ್ಟದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ದೊಡ್ಡ ಮಟ್ಟದ ಮೆರವಣಿಗೆ ನಡೆಸಲು ನಿರ್ಧಾರ. ಅಮಿತ್‌ ಶಾ ರಾಜೀನಾಮೆಗೆ ಒತ್ತಾಯಿಸಿ ರಾಷ್ಟ್ರಪತಿ ಅವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries