ಕಾಸರಗೋಡು: ಜಿಲ್ಲಮಟ್ಟದ ಕೇರಳೋತ್ಸವ ಅಂಗವಾಗಿ ಕಾಸರಗೋಡಿನಲ್ಲಿ ಆಯೋಜಿಸಲಾಗಿದ್ದ ಕಲಾ ಸಾಂಸ್ಕøತಿಕ ಸ್ಪರ್ಧೆಗಳನ್ನು ಮಾಜಿಪ್ರಧಾನಿ ಡಾ. ಮನ್‍ಮೋಹನ್ ಸಿಂಗ್ ಹಾಗೂ ಸಾಹಿತಿ ಎಂ.ಟಿ ವಾಸುದೇವನ್ ನಾಯರ್ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡುವುದರ ಜತೆಗೆ ಕಾರ್ಯಕ್ರಮ ಆಯೋಜಿಸಲು ಸಿದ್ಧಪಡಿಸಿದ್ದ ವೇದಿಕೆಯಲ್ಲಿ ಸಂತಾಪ ಸೂಚಕ ಸಭೆ ನಡೆಸಲಾಯಿತು.
ಕಲಾ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ರಾಜ್ಯ ಪ್ರಾಚ್ಯವಸ್ತು ಹಾಗೂ ನೋಂದಾವಣಾ ಖಾತೆ ಸಚಿವ ಕಡನ್ನಪಳ್ಳಿ ರಾಂಚಂದ್ರನ್ ಅವರು ಸಂತಾಪಸೂಚಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾಜಿ ಪ್ರಧಾನಿ ಹಾಗೂ ಎಂ.ಟಿ ಅವರಿಗೆ ಸಂತಾಪ ಸೂಚಿಸಿದರು.
ಜಿಲ್ಲಾ ಕೇರಳೋತ್ಸವ ಸಂಘಟನಾ ಸಮಿತಿಯು ಸಂಸ್ಮರಣಾ ಸಭೆ ಆಯೋಜಿಸಿತ್ತು. ಶಾಸಕ ಸಿ.ಎಚ್ ಕುಞಂಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಜ್ ಪಾದೂರು ಮೊದಲಾದವರು ಉಪಸ್ಥಿತರಿದ್ದರು.





