ಉಪ್ಪಳ: ಕಾಸರಗೋಡು ನಗರದ ಪ್ರಸಿದ್ದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಿ. 16 ರಿಂದ 19 ರ ವರೆಗೆ ಜರಗಲಿರುವ ಕೋಟಿ ಪಂಚಾಕ್ಷರಿ ಜಪಯಜ್ಞದ ಆಮಂತ್ರಣ ಪತ್ರಿಕೆಯನ್ನು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರಿಗೆ ನೀಡಲಾಯಿತು.
ಕೊಂಡೆವೂರು ಮಠದಲ್ಲಿ ಸ್ವಾಮೀಜಿ ಅವರನ್ನು ಜಪಯಜ್ಞ ಸಮಿತಿ ಪದಾಧಿಕಾರಿಗಳು ಭೇಟಿಯಾಗಿ ಆಮಂತ್ರಣಪತ್ರಿಕೆ ಹಸ್ತಾಂತರಿಸಿದರು. ಕೋಟಿಪಂಚಾಕ್ಷರಿ ಜಪ ಯಜ್ಞ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ, ರಾಮ್ ಪ್ರಸಾದ್, ಉಪಾಧ್ಯಕ್ಷರಾದ ಅರ್ಜುನ್ ತಾಯಲಂಗಾಡಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್, ಸದಸ್ಯರಾದ ಗಂಗಾಧರ ಉಪಸ್ಥಿತರಿದ್ದರು. ಸ್ವಾಮೀಜಿ ಮಂತ್ರಾಕ್ಷತೆ ನೀಡಿ ಹರಸಿದರು.






