ಮನೆಯಲ್ಲಿ ಕೆಲವೊಮ್ಮೆ ಪನ್ನೀರ್ ಬಳಸಿ ಖಾದ್ಯಗಳ ರೆಡಿ ಮಾಡುತ್ತೇವೆ. ಒನ್ನೀರ್ ರೈಸ್, ಪನ್ನೀರ್, ಪನ್ನೀರ್ ಗ್ರೇವಿ, ಪನ್ನೀರ್ ಮಸಾಲೆ ಹೀಗೆ ಒಂದಿಷ್ಟು ಖಾದ್ಯ ಮಾಡಿ ಸವಿಯುವುದು ಮಾಡುತ್ತೇವೆ. ವೆಜ್ ಪ್ರಿಯರು ತಮ್ಮ ಊಟದಲ್ಲಿ ಪನ್ನೀರ್ ಅನ್ನು ಸಾಮಾನ್ಯವಾಗಿ ಯಾವಾಗಲು ಬಳಸುತ್ತಾರೆ.
ಹಾಗೆ ಪನ್ನೀರ್ ಅನ್ನು ನಾವು ಅಂಗಡಿಯಿಂದ ಖರೀದಿಸಿ ತಂದು ಬಳಕೆ ಮಾಡುವುದು ಕಾಮನ್. ಆದ್ರೆ ಮನೆಯಲ್ಲೇ ಪನ್ನೀರ್ ಮಾಡಲು ಹಲವು ರೀತಿಯ ವಿಧಾನಗಳಿವೆ ಎಂಬುದನ್ನು ನಾವು ತಿಳಿದಿದ್ದೇವೆ. ಹಾಗೆ ಸುಲಭವಾಗಿ ಮನೆಯಲ್ಲಿಯೂ ಕೂಡ ನಾವು ಮಾಡಿರುತ್ತೇವೆ. ಆದ್ರೆ ಹಾಲಿನ ಪುಡಿಯಲ್ಲಿ ಪನ್ನೀರ್ ಮಾಡಿದ್ದೀರಾ?
ನೀವು ಹೆಚ್ಚಾಗಿ ಹಾಲನ್ನು ಬಳಸಿಕೊಂಡು ಪನ್ನೀರ್ ಮಾಡಿರುತ್ತೀರಿ. ಆದ್ರೆ ಹಾಲಿನ ಪುಡಿ ಬಳಸಿಕೊಂಡು ನಾವು ಅದ್ಭುತವಾದ ಪನ್ನೀರ್ ಮಾಡಿಕೊಳ್ಳಬಹುದು. ಹಾಗೆ ನಿಮಗೆ ಅಂಗನವಾಡಿಯಿಂದ ಹಾಲಿನ ಪುಡಿ ನೀಡುತ್ತಿದ್ದರೆ ಅದರಿಂದಲೂ ಮಾಡಬಹುದು. ಇದಕ್ಕೆ ಒಂದು ರೂಪಾಯಿ ಖರ್ಚಿಲ್ಲದಂತೆ ಈ ಪನ್ನಿರ್ ಮಾಡಬಹುದು.
ನಾವಿಂದು ಕಡಿಮೆ ಖರ್ಚಿನಲ್ಲಿ ಹಾಲಿನ ಪುಡಿಯಲ್ಲಿ ಪನ್ನೀರ್ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಒಂದು ಹನಿ ಹಾಲನ್ನು ಬಳಸದೆ ಈ ಪನ್ನೀರ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಹಾಲಿನ ಪುಡಿಯಿಂದ ಪನ್ನೀರ್ ಮಾಡುವುದು ಹೇಗೆ?
ಮೊದಲು ಒಂದು ಅಳತೆ ಕಪ್‌ನಲ್ಲಿ ಎರಡು ಕಪ್ ಹಾಲಿನ ಪುಡಿ ತೆಗೆದುಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ನಂತರ ಈ ಪುಡಿ ಮುಳುಗುವಷ್ಟು ನೀರು ಹಾಕಿಕೊಂಡಿ ಮಿಕ್ಸ್ ಮಾಡಿಕೊಳ್ಳಿ. ಒಂದು ಚೂರು ಗಂಟು ಇಲ್ಲದಂತೆ ತಿರುಗಿಸಿಕೊಳ್ಳುತ್ತಾ ನೀರಾಗಿ ಮಾಡಿಕೊಳ್ಳಿ. ಹಾಲಿನಂತೆ
ಮೃದುವಾಗಿ ಬರಬೇಕು.
ಈಗ ಒಲೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಕುದಿಯಲು ಬಿಡಬೇಕು. ಆಗಾಗ ತಿರುಗಿಸಿಕೊಳ್ಳುತ್ತಾ ಇರಿ. ಇಲ್ಲದಿದ್ದರೆ ತಳ ಹಿಡಿಯಲಿದೆ. ಹೀಗೆ ಹಾಲಿನಂತೆ ಕುದಿಬಂದು ಉಕ್ಕಿ ಬರುವ ಮುನ್ಸೂಚನೆ ಇದ್ದಾಗ ಒಲೆ ಆಫ್ ಮಾಡಿಕೊಳ್ಳಿ. ಹಾಗೆ ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಒಂದು ನಿಂಬೆ ಹಣ್ಣಿನ ರಸವನ್ನು ತೆಗೆದಿಟ್ಟುಕೊಂಡು ಅದನ್ನು ಈ ಕುದಿಬಂದ ಪಾತ್ರೆಗೆ ಹಾಕಿ ಎನ್ನಾಗಿ ಮಿಕ್ಸ್ ಮಾಡಿ. ಈ ಹಾಲು ಒಡೆಯಬೇಕು ಅಷ್ಟು ತಿರುಗಿಸಿಕೊಳ್ಳಿ.
ಈಗ ಒಂದು ಬಟ್ಟೆಯಲ್ಲಿ ಈ ಒಡೆದಿರುವ ಹಾಲನ್ನು ಹಾಕಿ ಹಿಂಡಿಕೊಳ್ಳಿ. ಅದಕ್ಕೆ ತಣ್ಣೀರು ಹಾಕಿ ಸಹ ಹಿಂಡಿಕೊಳ್ಳಿ. ಈಗ ಒಂದು ದೊಡ್ಡ ಉಂಡೆಯ ಪನ್ನೀರ್ ನೋಡಲು ಸಿಗುತ್ತದೆ. ಈ ಪನ್ನೀರ್‌ನಿಂದ ನೀರು ಸಂಪೂರ್ಣ ಹಿಂಡಿಕೊಳ್ಳಬೇಕು. ಈಗ ಬಟ್ಟೆಯಲ್ಲಿರುವ ಉಂಡೆಯಲ್ಲಿ ನೀರು ತೆಗೆಯಲು ಯಾವುದಾದರು ಭಾರವಾದ ವಸ್ತು ಅದರ ಮೇಲಿಟ್ಟು ಅರ್ಧ ಗಂಟೆ ಬಿಡಿ.
ಈಗ ಅದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ನಿಮಗೆ ಯಾವ ಖಾದ್ಯಕ್ಕೆ ಬೇಕೋ ಅದಕ್ಕೆ ಈ ಪನ್ನೀರ್ ಅನ್ನ ಬಳಸಿಕೊಳ್ಳಬಹುದು. ಇದನ್ನು ಫ್ರಿಡ್ಜ್‌ನಲ್ಲಿ ಒಂದು ವಾರಗಳ ಕಾಲ ಇಡಬಹುದು. ಇದನ್ನು ಮಾಡಲು ಹೆಚ್ಚು ಖರ್ಚಾಗುವುದಿಲ್ಲ. ಸುಲಭವಾಗಿ ಮಾಡಬಹುದು. ಅಂಗಡಿಯಲ್ಲಿ ದುಬಾರಿ ಬೆಲೆಯ ಪನ್ನೀರ್ ತರುವುದಕ್ಕಿಂತ ಈ ರೀತಿ ಸುಲಭವಾಗಿ ಮನೆಯಲ್ಲೇ ಮಾಡಿ ನೋಡಿ.
ಇದೇ ಪನ್ನೀರ್ ಬಳಸಿ ನೀವು ಹಲವು ಖಾದ್ಯ ಮಾಡಿ ಸವಿಯಬಹುದು. ಅದರಲ್ಲೂ ಬೆಳಗ್ಗೆ ತಿಂಡಿ, ಊಟಕ್ಕೆ ಗ್ರೇವಿ, ಸ್ವಿಟ್‌ಗಳನ್ನು ಮಾಡುವಾಗಲು ಈ ಪನ್ನೀರ್ ಬಳಸಬಹುದು.





