ಸಮರಸ ಚಿತ್ರಸುದ್ದಿ: ಕಾಸರಗೋಡು: ಅಖಿಲ ಕೇರಳ ಛಾಯಾಗ್ರಾಹಕರ ಸಂಘ(ಎಕೆಪಿಎ)ವು ರಾಜ್ಯದ ವಿವಿಧ ಜಿಲ್ಲಾ ಸಮ್ಮೇಳನಗಳ ಸಹಯೋಗದೊಂದಿಗೆ ನಡೆಸಿದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಕಾಸರಗೋಡಿನ ದಿನೇಶ್ ಇನ್‍ಸೈಟ್ ಅವರು ಕೊಲ್ಲಂ ಜಿಲ್ಲೆಯಲ್ಲಿ ಪ್ರಥಮ ಸ್ಥಾನ (ಮಹಿಳೆಯರ ಜೀವನದ ವಿಷಯ) ಮತ್ತು ತ್ರಿಶೂರ್ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ(ವಿಷಯ ಆಹಾರ)ಪಡೆದುಕೊಂಡಿದ್ದಾರೆ. ಇವರು ಎಕೆಪಿಎ ಕಾಸರಗೋಡು ಪೂರ್ವ ಘಟಕದ ಸದಸ್ಯ ಹಾಗೂ ಜಿಲ್ಲಾ ನ್ಯಾಚುರಲ್ ಕ್ಲಬ್ ಸಂಯೋಜಕರಾಗಿದ್ದಾರೆ.





