HEALTH TIPS

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ; ಮುಖ್ಯಮಂತ್ರಿಯತ್ತ ಧಾವಿಸಿ ಬಂದ ಯುವಕ- ಓರ್ವನ ವಶಕ್ಕೆ

ತಿರುವನಂತಪುರಂ: 29ನೇ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ನಿನ್ನೆ ಆರಂಭಗೊಂಡಿತು. 

ನಿಶಾಗಂಧಿ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿ ಮಾತನಾಡಿ, ಈ ಜಾತ್ರೆ ರಾಜಕೀಯ ವಿಷಯ ಮತ್ತು ಪ್ರಚಾರದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿದ್ದು, ಐಎಫ್‍ಎಫ್‍ಕೆ ಮೇಳವೆಂದೇ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು. 

ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೇಲೆ ಗುಂಪಿನಿಂದ ಆಗಮಿಸಿದ ಓರ್ವ ಆಕ್ರಮಿಸಲೆತ್ನಿಸಿದ ಘಟನೆಯೂ ನಡೆಯಿತು.ಈ ಸಂಬಂಧ ಒಬ್ಬ ವ್ಯಕ್ತಿಯನ್ನು ಮ್ಯೂಸಿಯಂ ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ವೇದಿಕೆ ತಲುಪಿದಾಗ ರೋಮಿಯೋ ಎಂಬ ಯುವಕ ಕೂಗಾಡಿ ಆಕ್ರಮಣ ಮುಂದಾದ ಎನ್ನಲಾಗಿದೆ.


ಯುವಕ ಈಗ ಮ್ಯೂಸಿಯಂ ಪೋಲೀಸ್ ಠಾಣೆಯಲ್ಲಿದ್ದಾನೆ. ಈ ಯುವಕ ಚಿತ್ರೋತ್ಸವದ ಪ್ರತಿನಿಧಿಯಲ್ಲ. ಆತನ ಬಳಿ 2022 ನೇ ವರ್ಷದ ಪಾಸ್ ಇತ್ತು. ತಿರುವನಂತಪುರದ ನಿಶಾಗಂಧಿಯಲ್ಲಿ 29ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಲಾಯಿತು. ಯುವಕನ ಕಡೆಯಿಂದ ಇಂತಹ ಪ್ರತಿಭಟನೆ ಏಕೆ ಎಂಬುದು ಸ್ಪಷ್ಟವಾಗಿಲ್ಲ.

ನಟಿ ಶಬಾನಾ ಅಜ್ಮಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. 15 ಚಿತ್ರಮಂದಿರಗಳಲ್ಲಿ 68 ದೇಶಗಳ 177 ಚಿತ್ರಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 14 ಚಿತ್ರಗಳು, ಮಲಯಾಳಂ ಸಿನಿಮಾ ಟುಡೇ ವಿಭಾಗದಲ್ಲಿ 12 ಚಿತ್ರಗಳು ಹಾಗೂ ಭಾರತೀಯ ಸಿನಿಮಾ ನೌ ವಿಭಾಗದಲ್ಲಿ ಏಳು ಚಿತ್ರಗಳು ವಿಶ್ವ ಸಿನಿಮಾ ವಿಭಾಗದಲ್ಲಿ 63 ಚಿತ್ರಗಳು ಸೇರ್ಪಡೆಗೊಂಡಿವೆ. ಉತ್ಸವದ ಮತ್ತೊಂದು ಆಕರ್ಷಣೆಯೆಂದರೆ ಫೆಸ್ಟಿವಲ್ ಫೇವರಿಟ್ಸ್, ಇದು ಅಂತರರಾಷ್ಟ್ರೀಯ ಉತ್ಸವಗಳಲ್ಲಿ ಮೆಚ್ಚುಗೆ ಗಳಿಸಿದ 13 ಚಲನಚಿತ್ರಗಳನ್ನು ಒಳಗೊಂಡಿದೆ. ಅರ್ಮೇನಿಯನ್ ಸಿನಿಮಾ ಶತಮಾನೋತ್ಸವದ ಅಂಗವಾಗಿ ಕಂಟ್ರಿ ಪೋಕಸ್ ವಿಭಾಗದಲ್ಲಿ ಏಳು ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries