ವಯನಾಡ್: ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ವಯನಾಡ್ ಡಿಸಿಸಿ ಖಜಾಂಚಿ ಹಾಗೂ ಅವರ ಪುತ್ರ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಡಿಸಿಸಿ ಖಜಾಂಚಿ ಎನ್.ಎಂ.ವಿಜಯನ್ ಹಾಗೂ ಪುತ್ರ ಜಿಜೇಶ್ ಇಬ್ಬರೂ ಎರಡು ಗಂಟೆಗಳ ಅಂತರದಲ್ಲಿ ಸಾವನ್ನಪ್ಪಿದ್ದಾರೆ.
ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮಂಗಳವಾರ ಮನೆಯೊಳಗೆ ಎನ್‍ಎಂ ವಿಜಯನ್ ಮತ್ತು ಅವರ ಪುತ್ರ ವಿಷ ಸೇವಿಸಿರುವುದು ಪತ್ತೆಯಾಗಿತ್ತು. ಸುಲ್ತಾನ್ ಬತ್ತೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸುದೀರ್ಘ ಕಾಲ ಎನ್.ಎಂ.ವಿಜಯನ್ ಕಾರ್ಯನಿರ್ವಹಿಸಿದ್ದರು. ಅವರ ಮಗ ಜಿಜೇಶ್ ದೈಹಿಕ ಸಮಸ್ಯೆಯಿಂದ ಬಹಳ ದಿನಗಳಿಂದ ಹಾಸಿಗೆ ಹಿಡಿದಿದ್ದರು.
ಇದು ಆತ್ಮಹತ್ಯೆ ಯತ್ನ ಎಂದು ತೀರ್ಮಾನಿಸಲಾಗಿತ್ತಾದರೂ ವಿಜಯನ್ ಮನೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರಗಳು ಪತ್ತೆಯಾಗಿಲ್ಲ. ಸುಲ್ತಾನ್ ಬತ್ತೇರಿ ಸಹಕಾರಿ ಬ್ಯಾಂಕ್ ನೇಮಕಾತಿ ಅವ್ಯವಹಾರ ವಿವಾದದ ಚರ್ಚೆ ನಡೆಯುತ್ತಿರುವಾಗಲೇ ವಿಜಯನ್ ಮತ್ತು ಅವರ ಪುತ್ರ ವಿಷ ಸೇವಿಸಿರುವುದು ಪತ್ತೆಯಾಗಿತ್ತು..





