ಬದಿಯಡ್ಕ: ಶಾಲೆಬಿಟ್ಟು ಮನೆಗೆ ತೆರಳುತ್ತಿದ್ದ 14ರ ಹರೆಯದ ವಿದ್ಯಾರ್ಥಿನಿಯನ್ನು ಬಿಗಿದಪ್ಪಿ ಕಿರುಕುಳಕ್ಕೆ ಯತ್ನಿಸಿದ ನೀರ್ಚಾಲು ಪಾಡ್ಲಡ್ಕ ನಿವಾಸಿ ಅನ್ವರ್(33)ಎಂಬಾತನನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಘಟನೆ ನಡೆದಿದೆ. ಶಾಲೆಬಿಟ್ಟು ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಕಾರಿನಲ್ಲಿ ಆಗಮಿಸಿದ ಆರೋಪಿ, ದಾರಿ ಕೇಳುವ ನೆಪದಲ್ಲಿ ಸನಿಹ ತೆರಳಿ ಬಿಗಿದಪ್ಪಿ ಕಿರುಕುಳಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭ ಬೊಬ್ಬಿಟ್ಟು ಈತನ ಕೈಯಿಂದ ಪಾರಾಗಿ ಮನೆಗೆ ತೆರಳಿದ ಬಾಲಕಿ ಮನೆಯವರಿಗೆ ಮಾಹಿತಿ ನೀಡಿದ್ದಳು. ಮನೆಯವರು ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಮಡು, ಆಸುಪಾಸಿನ ಸಿಸಿ ಕ್ಯಾಮರಾ ದರಸ್ಯಾವಳಿ ತಪಾಸಣೆ ನಡೆಸಿದಗ ಆರೋಪಿ ಬಗ್ಗೆ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧೀಸುವಲ್ಲಿ ಯಶಸ್ವಿಯಾಗಿದ್ದರು.



