ತಿರುವನಂತಪುರ: ಕೆಲವು ಶಿಕ್ಷಕರು ಅರ್ಧ ಸಮಯವನ್ನು ಶಾಲೆಯಲ್ಲಿ ಮತ್ತು ಅರ್ಧ ಸಮಯವನ್ನು ಟ್ಯೂಷನ್ ತರಗತಿಗಳಲ್ಲಿ ಕಳೆಯುತ್ತಾರೆ ಎಂದು ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಕಿಡಿಕಾರಿದ್ದಾರೆ. ಈ ಬಗ್ಗೆಯೂ ಗಂಭೀರವಾಗಿ ತನಿಖೆ ನಡೆಸಲಾಗುವುದು. ಸಾರ್ವಜನಿಕ ಶಿಕ್ಷಣ ನಿರ್ದೇಶಕ ಎಸ್. ಶಾನವಾಸ್ ನೇತೃತ್ವದಲ್ಲಿ ಆರು ಸದಸ್ಯರ ಸಮಿತಿಯನ್ನು ನೇಮಿಸಲಾಗಿದೆ ಎಂದಿರುವರು.
ತನಿಖೆ ನಡೆಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಪ್ರಶ್ನೆ ಪತ್ರಿಕೆಗಳ ವಿತರಣೆಯಲ್ಲಿ ಲೋಪಗಳಿದ್ದರೆ ಸರಿಪಡಿಸಿ ಮುಂದೆ ಸಾಗುವುದಾಗಿ ತಿಳಿಸಿದ ಸಚಿವರು, ಪ್ರಶ್ನೆ ಸೋರಿಕೆ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ರಾಜ್ಯ ಪೋಲೀಸ್ ವರಿಷ್ಠರನ್ನು ಖುದ್ದು ಭೇಟಿಯಾಗಿ ದೂರು ದಾಖಲಿಸಿದ್ದಾರೆ.
ಅಕ್ಟೋಬರ್ ನಲ್ಲಿ ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ಎಸ್.ಸಿ.ಇ.ಆರ್.ಟಿ. ಪರೀಕ್ಷೆ ನಡೆಸುವ ಕುರಿತು ನಿರ್ದೇಶಕರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು.






