HEALTH TIPS

ಭೂಮಿ ಚಪ್ಪಟೆಯಾಗಿದೆ ಎಂದು ನಿರೂಪಿಸಲು ಅಂಟಾರ್ಟಿಕ ತಲುಪಿದ ವ್ಯಕ್ತಿ ..! ಅಲ್ಲಿ ಆಗಿದ್ದೇನು ಗೊತ್ತಾ?

ಈ ಭೂಮಿ ಹೇಗಿದೆ ಎಂಬ ಪ್ರಶ್ನೆ ಕೇಳಿದ್ರೆ ಮಕ್ಕಳೂ ಕೂಡ ದುಂಡಾಗಿದೆ ಎಂಬ ಉತ್ತರ ಹೇಳ್ತಾರೆ. ಇದು ಸಾರ್ವಕಾಲಿಕ ಸತ್ಯ ಕೂಡ ಹೌದು. ಆದ್ರೆ ಈ ಭೂಮಿ ದುಂಡಾಕಾರವಾಗಿಲ್ಲ ಬದಲಿಗೆ ಸಮತಟ್ಟಾಗಿ ತಟ್ಟೆ ಆಕಾರದಲ್ಲಿದೆ ಎಂದು ನಂಬಿರುವ ಒಂದು ದೊಡ್ಡ ಸಮುದಾಯವೇ ಇದೆ ಅಂದ್ರೆ ನಂಬುತ್ತೀರಾ?
ಹೌದು ಭೂಮಿ ವೃತ್ತಾಕಾರವಾಗಿಲ್ಲ ತಟ್ಟೆಯಂತಿದೆ ಎಂದು ನಂಬುವ ಕೋಟಿ ಕೋಟಿ ಮಂದಿ ಈ ಭೂಮಿ ಮೇಲೆ ಇದ್ದಾರೆ. ಅವರು ಗುರುತ್ವಾಕರ್ಷಣಾ ಬಲ ಎಂಬ ಸಿದ್ದಾಂತವನ್ನೇ ಒಪ್ಪುವುದಿಲ್ಲ, ಈ ಭೂಮಿ ತಟ್ಟೆ ಆಕಾರದಲ್ಲಿದೆ ಹೀಗಾಗಿ ನಾವು ಅದರ ಮೇಲೆ ಇದ್ದೇವೆ. ವೃತ್ತಾಕಾರವಾಗಿದ್ದರೆ ನಾವು ಬೀಳುತ್ತಿದ್ದೆವು, ನೀರು ಕೂಡ ಈ ಭೂಮಿ ಮೇಲೆ ಇರುತ್ತಿರಲಿಲ್ಲ ಎಂಬ ವಿತಂಡವಾದ ಮಾಡುವ ಸಮುದಾಯವದು.
ಅವರು ಬರಿ ಬಾಯಿ ಮಾತಿನಲ್ಲಿ ಇದನ್ನು ಹೇಳುತ್ತಿಲ್ಲ ಬದಲಿಗೆ ಭೂಮಿ ಚಪ್ಪಟೆಯಾಗಿದೆ ಎಂಬುದನ್ನು ವಾದಿಸಲು ಅವರ ಬಳಿಯೂ ಒಂದಿಷ್ಟು ಸಿದ್ಧಾಂತಗಳಿವೆ. ಅದನ್ನು ನಿರೂಪಿಸಲು ಅವರು ಹರಸಾಹಸ ಪಡುತ್ತಲೇ ಇರುತ್ತಾರೆ. ಆದ್ರೆ ಈಗೊಬ್ಬ ಭೂಮಿ ವೃತ್ತಾಕಾರವಾಗಿಲ್ಲ ಎಂಬುದನ್ನು ನಿರೂಪಿಸಲು ಹೋಗಿ ಲಕ್ಷ ಲಕ್ಷ ಕಳೆದುಕೊಂಡಿದ್ದು ಅಲ್ಲದೆ ಭೂಮಿ ವೃತ್ತಾಕಾರವಾಗಿದೆ ಎಂಬ ಸತ್ಯ ಒಪ್ಪಿಕೊಂಡಿದ್ದಾನೆ.
ಏನಿದು ಘಟನೆ? 
ಜೆರಾನ್ ಕ್ಯಾಂಪನೆಲ್ಲಾ ಎಂಬಾತ ಭೂಮಿ ದುಂಡಾಗಿಲ್ಲ ಎಂದು ಸಾಬೀತು ಮಾಡುವ ಉದ್ದೇಶದಿಂದ ಫ್ಲಾಟ್ ಅರ್ಥರ್ಸ್‌ ಹಾಗೂ ಗ್ಲೋಬ್ ಅರ್ಥರ್ಸ್‌ ತಂಡವನ್ನು ಸೇರಿಸಿಕೊಂಡು ಅಂಟಾರ್ಟಿಕಾಗೆ ಪ್ರವಾಸ ಹೋಗಿದ್ದ. ಈ ಪ್ರವಾಸಕ್ಕೆ ಆತ ಖರ್ಚು ಮಾಡಿದ್ದು ಬರೋಬ್ಬರಿ 29 ಲಕ್ಷ ರೂಪಾಯಿ ಆಗಿತ್ತು. ಆದ್ರೆ ಅಲ್ಲಿ ಆತನಿಗೆ ಈ ಭೂಮಿ ಚಪ್ಪಟೆಯಾಗಿಲ್ಲ ಬದಲಿಗೆ ವೃತ್ತಾಕಾರವಾಗಿದೆ ಎಂಬ ಸತ್ಯ ಅರಿತುಕೊಂಡ.

ಅಂಟಾರ್ಟಿಕದಲ್ಲಿ ಆತನಿಗೆ ಆಗಿದ್ದೇನು? 
ಎರಡೂ ತಂಡಗಳು ಅಂಟಾರ್ಟಿಕ ತಲುಪಿ ಸತತ 24 ಗಂಟೆಗಳ ಕಾಲ ಸೂರ್ಯನನ್ನು ನೋಡುವಂತೆ ಮಾಡಲಾಗಿತ್ತು. ಸೂರ್ಯ 24 ಗಂಟೆಗಳ ಮುಳುಗದೆ ಸುತ್ತುವರೆಯುತ್ತಿರುವುದನ್ನು ನೋಡಿದರು. ಇದರಿಂದ ಜೆರಾನ್ ಕ್ಯಾಂಪನೆಲ್ಲಾ ಭೂಮಿ ಚಪ್ಪಟ್ಟೆಯಾಗಿಲ್ಲ ಬದಲಿಗೆ ವೃತ್ತಾಕಾರವಾಗಿದೆ ಎಂಬುದನ್ನು ಅರಿತುಕೊಂಡ.
ಕೆಲವೊಮ್ಮೆ ನೀವು ಜೀವನದಲ್ಲಿ ತಪ್ಪಾಗಿದ್ದೀರಿ. 24 ಗಂಟೆ ಸೂರ್ಯ ಸೂರ್ಯ ಇರುವುದಿಲ್ಲ ಎಂದು ನಾನು ಭಾವಿಸಿದ್ದೆ. ವಾಸ್ತವವಾಗಿ ನನಗೆ ಅದರ ಬಗ್ಗೆ ಸಾಕಷ್ಟು ಖಚಿತವಾಗಿತ್ತು ಎಂದು ಕ್ಯಾಂಪನೆಲ್ಲಾ ಹೇಳಿದ್ದಾನೆ. ಜೆರಾನ್ ಕ್ಯಾಂಪನೆಲ್ಲಾ ಅವರು ಅಂಟಾರ್ಕ್ಟಿಕಾಕ್ಕೆ ಭೇಟಿ ನೀಡುವ ಅನನ್ಯ ಅವಕಾಶವನ್ನು ನೀಡಿದ್ದಕ್ಕಾಗಿ ವಿಲ್ ಡಫಿಗೆ ಧನ್ಯವಾದ ಅರ್ಪಿಸಿದ್ದಾನೆ.
ಭೂಮಿ ದುಂಡಾಕಾರವಾಗಿಲ್ಲ ಎಂದು ವಾದಿಸುತ್ತಿದ್ದವರು ಅಂಟಾರ್ಟಿಕಕ್ಕೆ ಭೇಟಿ ನೀಡಿರಲಿಲ್ಲ. ಅವರ ಪ್ರಕಾರ ಭೂಮಿ ಅಂಟಾರ್ಟಿಕದಲ್ಲಿ ಅಂತ್ಯವಾಗುತ್ತದೆ ಎಂಬ ವಾದ ಮಂಡಿಸಿದ್ದರು. ಏಕೆಂದರೆ ಅಂಟಾರ್ಟಿಕಕ್ಕೆ ಭೇಟಿ ನೀಡುವುದು ಸುಕಭವಾಗಿರಲಿಲ್ಲ. ಅಲ್ಲಿ ಹಲವು ದೇಶಗಳು ತಮ್ಮ ಭೂಮಿ ಇದು ಎಂಬುದಾಗಿ ಘೋಷಿಸಿಕೊಂಡಿವೆ. ಹಾಗೆ ಈ ಪ್ರದೇಶ ವಶಕ್ಕೆ ಈಗಲೂ ವಾದ ಮಂಡಿಸಿವೆ. ಇದು ಇಡೀ ಭೂಮಿಯನ್ನು ವೃತ್ತಾಕಾರದಲ್ಲಿದೆ ಎಂದು ನಂಬಿಸಲು ಅಲ್ಲಿಗೆ ಯಾರನ್ನು ಬಿಡುತ್ತಿಲ್ಲ ಎಂಬ ವಾದವನ್ನು ಈ ಫ್ಲಾಟ್ ಅರ್ಥ್ ಸಿದ್ಧಾಂತಿಗಳು ಮಾಡುತ್ತಾ ಬಂದಿದ್ದರು.
ಸದ್ಯಕ್ಕೆ ಈ ದೊಡ್ಡ ವಿಚಾರವು ಚರ್ಚೆಗೆ ಬಂದಿದೆ. ಇನ್ನಾದರೂ ಭೂಮಿ ಚಪ್ಪಟೆಯಾಗಿದೆ ಎಂದು ವಾದ ಮಾಡುವುದನ್ನು ಅವರು ನಿಲ್ಲಿಸಬಹುದು ಎಂದು ಅಂದಾಜಿಸಲಾಗಿದೆ. ವಿಡಿಯೋವನ್ನು SciManDan ಯೂಟ್ಯೂಬ್ ಚಾನಲ್‌ನಲ್ಲಿ ವೀಕ್ಷಿಸಬಹುದು.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries