HEALTH TIPS

ದೇವಾಲಯದ ಆಚಾರ-ವಿಚಾರ ರಕ್ಷಣೆಗಾಗಿ ಹೋರಾಟ ತೀವ್ರ-ಆಚರಣೆ ಸಂರಕ್ಷಣ ಸಮಿತಿ

ತ್ರಿಶೂರ್: ಕೇರಳದಲ್ಲಿ ದೇವಾಲಯದ ಆಚರಣೆಗಳು ಮತ್ತು ಉತ್ಸವಗಳು ಎದುರಿಸುತ್ತಿರುವ ಬಿಕ್ಕಟ್ಟನ್ನು ಹೋಗಲಾಡಿಸಲು ಸರ್ಕಾರ ಶಾಸನವನ್ನು ಸಿದ್ಧಪಡಿಸಬೇಕು ಎಂದು ತ್ರಿಶೂರ್‍ನಲ್ಲಿ ನಡೆದ ದೇವಾಲಯದ ಆಚರಣೆಗಳ ಸಂರಕ್ಷಣೆ ಸಮಾವೇಶವು ಒತ್ತಾಯಿಸಿತು.

ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ದೇವಸ್ಥಾನ, ದೇವಸ್ವಂ ಅಧಿಕಾರಿಗಳು ಸಭೆಯಲ್ಲಿ ಈ ವಿಷಯ ತಿಳಿಸಿದರು. ತ್ರಿಶೂರ್ ಪೂರಂ ಸೇರಿದಂತೆ ಕೇರಳದ ಪ್ರಮುಖ ಹಬ್ಬಗಳ ಮೇಳಪ್ರಮಣಿಗಳಾದ ಪೆರುವನಂ ಕುಟ್ಟನ್ ಮಾರಾರ್ ಮತ್ತು ಎಸ್ಕಿಷ್ಕುಟ್ ಅನಿಯನ್ ಮಾರಾರ್ ಸಮಾವೇಶ ಉದ್ಘಾಟಿಸಿದರು. ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷ ಆರ್.ವಿ. ಬಾಬು ಅಧ್ಯಕ್ಷತೆ ವಹಿಸಿದ್ದರು.


ಆರ್‍ಎಸ್‍ಎಸ್ ಉತ್ತರ ಕೇರಳ ಜಿಲ್ಲಾ ಕಾರ್ಯವಾಹ ಪಿ.ಎನ್. ಈಶ್ವರನ್, ಹಿಂದೂ ಐಕ್ಯವೇದಿ ಕಾರ್ಯಾಧ್ಯಕ್ಷ ವತ್ಸನ್ ತಿಲಂಗೇರಿ, ಪರಮೇಕಾವ್ ದೇವಸ್ವಂ ಕಾರ್ಯದರ್ಶಿ ಜಿ.ರಾಜೇಶ್, ತಿರುವಂಬಾಡಿ ದೇವಸ್ವಂ ಕಾರ್ಯದರ್ಶಿ ಕೆ. ಗಿರೀಶ್ ಕುಮಾರ್, ಆರ್‍ಎಸ್‍ಎಸ್ ಪ್ರಾಂತ ಕಾರ್ಯಕಾರಿ ಎ.ಆರ್. ಮೋಹನ್ ಮತ್ತಿತರರು ಮಾತನಾಡಿದರು. ಪಿ. ಸುಧಾಕರನ್ ಸ್ವಾಗತಿಸಿ, ಕೆ.ಎಸ್. ಶ್ರೀಧರನ್ ವಂದಿಸಿದರು. 

ಆನೆ ಮೆರವಣಿಗೆಗೆ ತಡೆ ಹಾಗೂ ದೇವಸ್ಥಾನದ ಉತ್ಸವಗಳಿಗೆ ಅಡ್ಡಿಪಡಿಸುವ ಧೋರಣೆ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಲು ಸಮಾವೇಶ ನಿರ್ಧರಿಸಿದೆ.

ಮಂಡಲ ಅವಧಿ ಮುಗಿಯುವ ಡಿಸೆಂಬರ್ 26 ರಂದು ದೇವಸ್ಥಾನಗಳಲ್ಲಿ ಭಕ್ತಾದಿಗಳ ಸಮಾವೇಶ ಏರ್ಪಡಿಸಲಾಗುವುದು. ಜನವರಿ 15ರೊಳಗೆ ಜಿಲ್ಲಾ ಮಟ್ಟದಲ್ಲಿ ಉತ್ಸವ ಸಂರಕ್ಷಣಾ ಸಮಾವೇಶಗಳನ್ನು ಆಯೋಜಿಸಲಾಗುವುದು. ಫೆಬ್ರವರಿ 1 ರಂದು ತ್ರಿಶೂರ್‍ನಲ್ಲಿ ರ್ಯಾಲಿ ಆಯೋಜಿಸಲಾಗಿದೆ.

ಪೆರುವನಂ ಕುಟ್ಟನ್ ಮಾರಾರ್ (ಅಧ್ಯಕ್ಷರು) ವತ್ಸನ್ ತಿಲಂಗೇರಿ (ಕಾರ್ಯಾಧ್ಯಕ್ಷರು) ಮತ್ತು ಹಿಂದೂ ಐಕ್ಯವೇದಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಹರಿದಾಸ್ (ಜನರಲ್ ಕನ್ವೀನರ್), ಪರಮೆಕ್ಕಾವ್ ದೇವಸ್ವಂ ಕಾರ್ಯದರ್ಶಿ ರಾ ಜೇಶ್ ಉಧುವಾಲ್, ತಿರುವಂಬಾಡಿ ದೇವಸ್ವಂ ಕಾರ್ಯದರ್ಶಿ ಕೆ. ಗಿರೀಶ್ ಕುಮಾರ್ (ಉಪಾಧ್ಯಕ್ಷರು). ಕೆ.ಎಸ್. ನಾರಾಯಣನ್, ವಿ.ಆರ್. ರಾಜಶೇಖರನ್, ಮುರಳಿ ಕೊಳಂಗಾಟ್ ಮತ್ತು ಪಿ.ಸುಧಾಕರನ್ (ಸಂಚಾಲಕರು) ಆಯ್ಕೆಯಾದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries