ಪತ್ತನಂತಿಟ್ಟ: ಈ ಬಾರಿಯ ಮಂಡಲ ಮತ್ತು ಮಕರ ಬೆಳಕು ಯಾತ್ರೆಯ ಋತುವಿನಲ್ಲಿ ದೇವಸ್ವಂ ಮಂಡಳಿಯು ಶಬರಿಮಲೆಯಿಂದ ಒಟ್ಟು 440 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ.
ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಅವರು ಈ ವರ್ಷ ಕಳೆದ ವರ್ಷಕ್ಕಿಂತ 110 ಕೋಟಿ ರೂ.ಗಳಷ್ಟು ಹೆಚ್ಚು ಆದಾಯ ಪಡೆದಿದೆ ಎಂದು ಘೋಷಿಸಿರುವರು. ಅರವಣನ ಪ್ರಸಾದದಿಂದ 192 ಕೋಟಿ ಗಳಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ 50 ಕೋಟಿ ರೂ. ಹೆಚ್ಚಾಗಿದೆ. ಟೋಕನ್ ಆಗಿ 126 ಕೋಟಿ ರೂಪಾಯಿಗಳನ್ನು ಸ್ವೀಕರಿಸಲಾಗಿದ್ದು, ಹಿಂದಿನ ವರ್ಷಕ್ಕಿಂತ 17 ಕೋಟಿ ರೂಪಾಯಿ ಹೆಚ್ಚಾಗಿದೆ. 52.48 ಲಕ್ಷ ಯಾತ್ರಿಕರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಅಧ್ಯಕ್ಷರು ತಿಳಿಸಿರುವರು.





