ಬೆಂಗಳೂರು: ಅಮೂಲ್ ಸಂಸ್ಥೆಯು ದೇಶದಾದ್ಯಂತ ಹಾಲಿನ ದರದಲ್ಲಿ ₹1 ಕಡಿತ ಮಾಡಿದೆ.
ಅಮೂಲ್ ಗೋಲ್ಡ್, ಅಮೂಲ್ ತಾಜಾ ಮತ್ತು ಅಮೂಲ್ ಟೀ ಸ್ಪೆಷಲ್ 1 ಲೀಟರ್ ಹಾಲಿನ ಪ್ಯಾಕೆಟ್ ಬೆಲೆಯಲ್ಲಿ ₹1 ಕಡಿತ ಮಾಡಿದೆ. ಈ ದರ ಕಡಿತವು 1 ಲೀಟರ್ ಹಾಲಿನ ಪ್ಯಾಕೆಟ್‌ಗೆ ಮಾತ್ರ ಅನ್ವಯವಾಗಲಿದೆ ಎಂದು ಗುಜರಾತ್ ಹಾಲು ಮಾರಾಟ ಸಹಕಾರ ಒಕ್ಕೂಟದ(ಜಿಸಿಎಂಎಂಎಫ್) ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ತಿಳಿಸಿದ್ದಾರೆ.
ದರ ಪರಿಷ್ಕರಣೆಯ ನಂತರ ಅಮೂಲ್ ಗೋಲ್ಡ್ ಹಾಲಿನ ಒಂದು ಲೀಟರ್ ಪೌಚ್ ಬೆಲೆ ₹66ರಿಂದ ₹65ಕ್ಕೆ, ಅಮೂಲ್ ಟೀ ಸ್ಪೆಷಲ್ ಹಾಲಿನ ಒಂದು ಲೀಟರ್ ಪೌಚ್ ಬೆಲೆ ₹62ರಿಂದ ₹61ಕ್ಕೆ ಮತ್ತು ಅಮೂಲ್ ತಾಜಾ ಹಾಲಿನ ದರ ಲೀಟರ್‌ಗೆ ₹54 ನಿಂದ ₹53ಕ್ಕೆ ಇಳಿಕೆಯಾಗಿದೆ.
ಈ ಹಿಂದೆ, 2024ರ ಜೂನ್ ತಿಂಗಳಲ್ಲಿ ಅಮೂಲ್ ಹಾಲಿನ ಬೆಲೆಯಲ್ಲಿ ಲೀಟರ್‌ಗೆ ₹2 ಹೆಚ್ಚಿಸಲಾಗಿತ್ತು.




