ನವದೆಹಲಿ: ಕೇಂದ್ರ ಸರ್ಕಾರವು ಈ ಸಾಲಿನ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪುರಸ್ಕೃತರ ಹೆಸರುಗಳನ್ನು ಶನಿವಾರ ಪ್ರಕಟಿಸಿದೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಯನ್ನು ಘೋಷಿಸಿದರು.
ಪ್ಯಾರಾಲಿಂಪಿಕ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಹರ್ವಿಂದರ್ ಸಿಂಗ್ ಹಾಗೂ ಕರ್ನಾಟಕ ವೆಂಕಪ್ಪ ಅಂಬಾಜಿ ಅವರಿಗೆ ಪದ್ಮಶ್ರೀ ಘೋಷಣೆಯಾಗಿದೆ.
ಗರ್ಭ ಕೊರಳಿನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಹಾಗೂ ಚಿಕಿತ್ಸೆ ನೀಡುವಲ್ಲಿ ಗಮನಾರ್ಹ ಕೆಲಸ ಮಾಡಿದ ಸ್ತ್ರೀರೋಗ ತಜ್ಞೆ ಡಾ. ನೀರಜಾ ಭಾತ್ಲಾ, ತುಳಿತಕ್ಕೊಳಗಾದ ಮುಸಾಹರ್ ಸಮುದಾಯದ ಏಳಿಗಾಗಿ 'ನಯೀ ಆಶಾ' ಸಂಘಟನೆ ಮೂಲಕ ಶ್ರಮಿಸಿದ ಭೋಜಪುರದ ಸಾಮಾಜಿಕ ಕಾರ್ಯಕರ್ತ ಭೀಮ್ ಸಿಂಗ್ ಭವೇಶ್, ಕಳೆದ ಐದು ದಶಕಗಳಿಂದ ನಾಗಸ್ವರವಾದನದ ಥವಿಲ್ ನುಡಿಸುತ್ತಿರುವ ಪಿ. ದಚ್ಚಣಮೂರ್ತಿ, ಹಣ್ಣು ಬೆಳೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ ನಾಗಾಲ್ಯಾಂಡ್‌ನ ಎಲ್.ಹ್ಯಾಂಗ್ತಿಂಗ್ ಅವರಿಗೆ ಪದ್ಮಶ್ರೀ ದೊರೆತಿದೆ.
ಕಲೆ, ಸಮಾಜುಮುಖಿ ಕಾರ್ಯ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಹಾಗೂ ಎಂಜಿನಿಯರಿಂಗ್, ವ್ಯಾಪಾರ ಹಾಗೂ ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗ ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ.
ಪೋರ್ಚುಗೀಸದರ ಹಿಡತದಲ್ಲಿದ್ದ ಗೋವಾ ಸ್ವಾತಂತ್ರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಿಬಿಯಾ ಲೊಬೊ ಸರದೇಸಾಯಿ, ಧಕ್ ವಾದಕ ಗೋಕುಲ ಚಂದ್ರ ಡೇ ಅವರು ಪುರುಷ ಪ್ರಧಾನ ಕ್ಷೇತ್ರದಲ್ಲಿ 150 ಮಹಿಳೆಯರಿಗೆ ತರಬೇತಿ ನೀಡುವುದರ ಜತೆಗೆ 1.5 ಕೆ.ಜಿ. ತೂಕದ ಹಗುರ ಧಕ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಮಹೇಶ್ವರದಲ್ಲಿ ಕೈಮಗ್ಗದ ಶಾಲೆ ತೆರೆದು 300 ವರ್ಷಗಳ ಹಳೆಯದಾದ ಪಾರಂಪರಿಕ ಜವಳಿ ಉದ್ಯಮಕ್ಕೆ ಪುನಶ್ಚೇತನ ನೀಡಿದ ಸಾಲಿ ಹೋಲ್ಕರ್ ಅವರೂ ಪದ್ಮಶ್ರೀಗೆ ಭಾಜನರಾಗಿದ್ದಾರೆ.





