ಹಾಗೆ ಈಗ ಗುಜರಾತ್‌ನ ಜಾಮ್‌ನಗರದಲ್ಲಿ ಕಾಂಗೋ ಜ್ವರ ಕಾಣಿಸಿಕೊಂಡಿದ್ದು ಓರ್ವ ಮೃತಪಟ್ಟಿರುವುದಾಗಿ ವರದಿಯಾಗಿದೆ. ಕ್ರಿಮಿಯನ್ ಕಾಂಗೋ ಹೆಮರಾಜಿಕ್ ಜ್ವರ ಅಥವಾ ಸಿಸಿಹೆಚ್‌ಎಫ್ ಎಂಬ ಮಾರಕ ಕಾಯಿಲೆ ಇದಾಗಿದೆ. ಈ ಕಾಯಿಲೆಗೆ ಒಳಗಾಗಿದ್ದ 51 ವರ್ಷದ ವ್ಯಕ್ತಿಯೊಬ್ಬ ವೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಕಳೆದ 5 ವರ್ಷದಲ್ಲಿ ಈ ಕಾಂಗೋ ವೈರಸ್‌ಗೆ ಬಲಿಯಾದ ಮೊದಲ ವ್ಯಕ್ತಿಯಾಗಿದ್ದಾರೆ.
ತೀವ್ರ ಜ್ವರದ ಕಾರಣ ಆತ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಬಹುಅಂಗಾಂಗ ವೈಕಲ್ಯದಿಂದಾಗಿ ಮೃತಪಟ್ಟಿದ್ದಾರೆ. ಹಾಗೆ ಈ ವೈರಸ್ ಕೂಡ ಅವರಲ್ಲಿ ದೃಢವಾಗಿತ್ತು. ಆತ ಜಾನುವಾರು ಸಾಕಣಿಕೆದಾರ ಎಂದು ಗುರುತಿಸಲಾಗಿದೆ. ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹಾಗೆ 6 ದಿನಗಳ ಕಾಲ ಆತ ಆಸ್ಪತ್ರೆಯಲ್ಲು ಬದುಕುಳಿದಿದ್ದ.
ಆತನ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಕ್ಕೆ ಕಳುಹಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಆತನಿಗೆ ವೈರಸ್ ಇರುವುದು ದೃಢವಾಗಿತ್ತು. ಹೀಗಾಗಿ ಆತ ನೆಲೆಸಿದ್ದ ಸ್ಥಳದಲ್ಲಿ ಎಚ್ಚರಿಕೆ ಇಂದ ಇರಲು ಸೂಚಿಸಲಾಗಿದೆ. ಹಾಗೆ ಕುಟುಂಬದ ಸದಸ್ಯರು ಕೂಡ ಪರೀಕ್ಷಗೆ ಒಳಗಾಗಲು ಸೂಚಿಸಲಾಗಿದೆ. ನೈರ್ಮಲ್ಯ ಕಾಪಾಡಿಕೊಳ್ಳಲು ಆಧ್ಯತೆ ನೀಡುವಂತೆ ಅಲ್ಲನ ಜನರಿಗೆ ಸೂಚಿಸಲಾಗಿದೆ.
ಕ್ರಿಮಿಯನ್-ಕಾಂಗೋ ಹೆಮರಾಜಿಕ್ ಜ್ವರ ಎಂದರೇನು?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕಾಂಗೋ ಹೆಮರಾಜಿಕ್ ಎಂಬುದು ಬುನ್ಯಾವಿರಿಡೆ ಕುಟುಂಬದ ಟಿಕ್-ಹರಡುವ ವೈರಸ್ (ನೈರೋವೈರಸ್) ನಿಂದ ಉಂಟಾಗುವ ಕಾಯಿಲೆಯಾಗಿದೆ. ಇದರ ಸಾವಿನ ಪ್ರಯಾಣ 10ರಿಂದ 40ರಷ್ಟಿದೆ. ಇದು ಮುಖ್ಯವಾಗಿ ಆಫ್ರಿಕಾ, ಬಾಲ್ಕನ್ಸ್, ಮಧ್ಯಪ್ರಾಚ್ಯ ಮತ್ತು ಏಷ್ಯನ್ ದೇಶಗಳಲ್ಲಿ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಇದು ಪ್ರಾಣಿಗಳಿಂದ ಹರಡುತ್ತದೆ. ಪ್ರಾಣಿಗಳ ಉಣ್ಣೆಯಲ್ಲಿರುವ ಕೀಟಗಳಿಂದ ಇದು ಮಾನವರಿಗೆ ಹರಿಡುವ ಅಪಾಯ ಹೆಚ್ಚು.
ಈ ವೈರಸ್ ತಗುಲಿದ ಪ್ರಾಣಿಗಳ ಸಂಪರ್ಕದಿಂದ ಅಥವಾ ಆ ಪ್ರಾಣಿಗಲ್ಲಿರುವ ಕೀಟಗಳು, ಒಣಗು ಮಾನವರಿಗೆ ಕಚ್ಚುವುದರಿಂದಲೂ ಈ ವೈರಸ್ ಹರಡುತ್ತದೆ. ಹೆಚ್ಚಾಗಿ ಕೃಷಿ ಕೆಲಸಗಾರರು, ಹೈನುಗಾರಿಕೆ, ಕಸಾಯಿಖಾನೆಯಲ್ಲಿ ಕೆಲಸ ಮಾಡುವವರಿಗೆ ಸುಲಭವಾಗಿ ಹರಡುತ್ತದೆ. ಇನ್ನು ಮಾನವರಿಂದ ಮಾನವರಿಗೂ ಇದು ಹರಡುತ್ತದೆ. ಅವರ ಸಂಪರ್ಕಕ್ಕೆ ಬರುವುದರಿಂದ ಹರಡುತ್ತದೆ.
ಈ ಕಾಂಗೋ ಜ್ವರದ ಲಕ್ಷಣವೇನು?
- ಅಧಿಕ ಜ್ವರ
- ಸ್ನಾಯು ನೋವು
- ತಲೆತಿರುಗುವಿಕೆ
- ಕುತ್ತಿಗೆ ನೋವು
- ಬೆನ್ನುನೋವು
- ತಲೆನೋವು
- ಕಣ್ಣು ನೋವು
- ಬೆಳಕಿಗೆ ಒಡ್ಡಿಕೊಳ್ಳಲು ಆಗದಿರುವುದು
- ವಾಕರಿಕೆ
- ಅತಿಸಾರ
- ಹೊಟ್ಟೆ ನೋವು
- ಗಂಟಲು ನೋವು
- ಗೊಂದಲ ಮತ್ತು ಸನ್ನಿವೇಶ
- ನಿದ್ರೆ
- ಖಿನ್ನತೆ
- ಅಲರ್ಜಿ ಮೂಡುವುದು
- ಮೂತ್ರದಲ್ಲಿ ರಕ್ತ
ಈ ವೈರಸ್ ಹರಡಿದ ಬಳಿಕ ಚಿಕಿತ್ಸೆ ಆರಂಭಗೊಂಡ 10 ದಿನಗಳ ನಂತರ ಸುಧಾರಣೆ ಕಾಣಲಿದ್ದಾರೆ, ಹೀಗಾಗಿಯೇ ಈ ವೈರಸ್‌ನ ಮರಣ ಪ್ರಮಾಣ ಅಧಿಕವಾಗಿದೆ. ಶೇ 30ರಷ್ಟು ಮರಣ ಪ್ರಮಾಣ ಹೊಂದಿರುವ ಇದು ಅತ್ಯಂತ ಅಪಾಯಕಾರಿ ವೈರಸ್ ಎನಿಸಿಕೊಂಡಿದೆ. ಈ ಕಾಯಿಲೆಗೆ ಯಾವುದೇ ಲಸಿಕೆಯಿಲ್ಲ. ಸಾಮಾನ್ಯ ಜ್ವರಕ್ಕೆ ನೀಡುವಂತಹ ಚಿಕಿತ್ಸೆಯೇ ಇದಕ್ಕೂ ನೀಡಲಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಈ ವೈರಸ್ ಪ್ರಾಣಕ್ಕೆ ಅಪಾಯ ತರುವುದು ಹೆಚ್ಚು ಎಂದು ತಿಳಿದುಬಂದಿದೆ.




