ಅಂಕರ: ಟರ್ಕಿಯ ಸ್ಕೈ ರೆಸಾರ್ಟ್ ಹೋಟೆಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 66 ಮಂದಿ ಮೃತಪಟ್ಟು, 35ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಅವರನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.
ಬೆಳಗಿನ ಜಾವ 3.27ರ ಸುಮಾರಿಗೆ ಬೊಲು ಪ್ರಾಂತ್ಯದ ಕಾರ್ತಲ್ಕ್ಯ ರೆಸಾರ್ಟ್‌ನ ಹೋಟೆಲ್‌ವೊಂದರಲ್ಲಿ ಈ ಅವಘಡ ಸಂಭವಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ದುರದೃಷ್ಟವಶಾತ್ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಗಾಯಾಳುಗಳ ಸಂಖ್ಯೆ 32 ಆಗಿದೆ. ಮೃತರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಮತ್ತು ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವುದಾಗಿ ಅವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
267 ಮಂದಿ ತುರ್ತು ಕಾರ್ಯಾಚರಣಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಆಂತರಿಕ ಮತ್ತು ಪ್ರವಾಸೋದ್ಯಮ ಸಚಿವರು ಘಟನಾ ಸ್ಥಳದತ್ತ ತೆರಳುತ್ತಿದ್ದು, ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಸಚಿವಾಲಯಗ್ಳು ತಿಳಿಸಿವೆ.
ಈ ರೆಸಾರ್ಟ್ ಚಳಿಗಾಲದಲ್ಲಿ ಪ್ರವಾಸಿಗರ ಅತ್ಯಂತ ನೆಚ್ಚಿನ ಸ್ಥಳವಾಗಿದೆ. ಅದರಲ್ಲೂ ಶಾಲಾ ರಜಾದಿನಗಳಲ್ಲಿ(ಜನವರಿ, ಫೆಬ್ರುವರಿ) ಹಾಲಿಡೇ ಕಳೆಯಲು ಅಚ್ಚುಮೆಚ್ಚಿನ ಸ್ಥಳವಾಗಿದೆ.
ಹೋಟೆಲ್‌ನಲ್ಲಿ ಸುಮಾರು 234 ಅತಿಥಿಗಳು ತಂಗಿದ್ದರು. ಆತಂಕದಲ್ಲಿ ಕಟ್ಟಡದಿಂದ ಜಿಗಿದ ಇಬ್ಬರು ಅಸುನೀಗಿದ್ದಾರೆ ಎಂದು ಬೊಲು ಗವರ್ನರ್ ಅಬ್ದುಲ್ ಅಜೀಜ್ ತಿಳಿಸಿದ್ದಾರೆ.
ಹೋಟೆಲ್‌ನ ಮಹಡಿಗಳಲ್ಲಿ ಬೆಂಕಿಯ ಜ್ವಾಲೆ ಆವರಿಸಿದ್ದು, ಜನರು ಬೆಡ್‌ಶೀಡ್‌ಗಳನ್ನು ಸುತ್ತಿಕೊಂಡು ರಕ್ಷಣೆ ಪಡೆಯುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.




