ಮುಳ್ಳೇರಿಯ: ಕೃಷಿಕರ ಹಿತ ಸಂರಕ್ಷಣೆಗೆ ಕ್ಯಾಂಪ್ಕೊ ಬದ್ಧವಾಗಿದ್ದು; ಅಡಕೆಯ ಬೆಲೆಯನ್ನು ಹಿಡಿದಿಡಲು ಕ್ಯಾಂಪ್ಕೊದಿಂದ ಸಾಧ್ಯವಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಅವರು ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ sಶನಿವಾರ ನಡೆದ ಕೇಂದ್ರ ಅಡಿಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣೆ ಸಹಕಾರಿ ಸಂಸ್ಥೆ ಕ್ಯಾಂಪ್ಕೊದ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿe್ಞÁನಿಗಳ ಸಹಕಾರದಿಂದ ಅಡಕೆಯ ಹಳದಿಚುಕ್ಕೆ ರೋಗವನ್ನು ತಡೆಗಟ್ಟುವ ಬಗ್ಗೆ ಸೂಕ್ತ ದಾರಿಯನ್ನು ಕಂಡುಕೊಳ್ಳಲಾಗುವುದು. ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಿ ಕೃಷಿಕರನ್ನು ಸಂರಕ್ಷಿಸಲು ಸರಕಾರವನ್ನು ಎಚ್ಚರಿಸುವ ಕೆಲಸ ಆಗಬೇಕಾಗಿದೆ. ಹೊಸ ಅಡಕೆ ಮತ್ತು ಹಳೆ ಅಡಕೆಯ ಬೆಲೆಯ ತಾರತಮ್ಯ ಗುಣಮಟ್ಟ ಮತ್ತು ಬೇಡಿಕೆಯನ್ನು ಆದರಿಸಿ ಬರುವಂತಹುದು. ಕ್ಯಾಂಪ್ಕೊಗೆ ನಷ್ಟವಾದರೂ ಅಡಕೆ ಬೆಳೆಗಾರರಿಗೆ ಉತ್ತಮ ಬೆಲೆಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಡಬ್ಲ್ಯುಎಚ್‍ಒ ದಲ್ಲಿ ಅಡಕೆಯ ಮೇಲೆ ಕ್ಯಾನ್ಸರ್ ಎಂಬ ಗುಮ್ಮವನ್ನು ಕೂರಿಸಿದೆ. ಮಿಶ್ರಬೆಳೆಗೆ ಕೃಷಿಕರು ಮನಮಾಡಬೇಕು. ಕ್ಯಾಂಪ್ಕೊದ ಅಸ್ತಿತ್ವ ಕೃಷಿಕರ ಭರವಸೆಯ ಮೇಲೆ ನಿಂತಿದೆ ಎಂದು ಹೇಳಿದರು.
ಹಿರಿಯ ಕೃಷಿಕರಾದ ಶಿವರಾಮ ಮಣಿಯಾಣಿ, ಪದ್ಮಶ್ರೀ ಪುರಸ್ಕøತ ಸತ್ಯನಾರಾಯಣ ಬೆಳೇರಿ, ಸುಷ್ಮಾಚಂದ್ರನ್, ಪ್ರಭಾಕರ ಕಲ್ಲೂರಾಯ ಬನದ ಗದ್ದೆ, ನಾರಾಯಣ ನಾಯ್ಕ, ಶಿವರಾಮ ಮಣಿಯಾಣಿ, ಶ್ರೀಹರಿಭಟ್ ದೀಪ ಜ್ವಲನೆಯ ಮೂಲಕ ಉದ್ಘಾಟಿಸಿದರು.
ಕ್ಯಾಂಪ್ಕೊ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಆರೋಗ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಡಾ.ಬಿ.ವಿ.ಸತ್ಯನಾರಾಯಣ ಕ್ಯಾಂಪ್ಕೋ ವಹಿವಾಟುಗಳ ಬಗ್ಗೆ ತಿಳಿಸಿದರು. ನಿರ್ದೇಶಕ ಜಯರಾಮ ಸರಳಾಯ, ಸುರೇಶ್ ಕುಮಾರ್ ಶೆಟ್ಟಿ, ಕೃಷ್ಣ ಪ್ರಸಾದ್ ಮಡ್ತಿಲ, ಬಾಲಕೃಷ್ಣ ರೈ ಬಾನೋಟ್ಟು, ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ, ನಿರ್ದೇಶಕ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ನಿರ್ದೇಶಕ ರಾಧಾಕೃಷ್ಣನ್ ಕರಿಂಬಿಲ, ಮಾರ್ಕೆಟಿಂಗ್ ವಿಭಾಗದ ಗೋವಿಂದ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಕಡಂಬಳಿತ್ತಾಯ, ಬಳಕ್ಕ ಶಿವಕೃಷ್ಣ ಭಟ್, ಕೋಳಾರ್ ಸತೀಶ್ಚಂದ್ರ ಶೆಟ್ಟಿ, ಮೋನಪ್ಪ ಆಳ್ವ, ರವೀಶ ತಂತ್ರಿ ಕುಂಟಾರು, ಕಾರಡ್ಕ ಪಂ.ಅಧ್ಯಕ್ಷ ಗೋಪಾಲಕೃಷ್ಣ, ಉಪಾಧ್ಯಕ್ಷೆ ಜನನಿ.ಎಂ ಮೊದಲಾದವರು ಭಾಗವಹಿಸಿದ್ದರು.
ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ ಪ್ರಾರ್ಥನೆ ಹಾಡಿದರು. ಕ್ಯಾಂಪ್ಕೊ ನಿರ್ದೇಶಕ ಸತ್ಯನಾರಾಯಣ ಪ್ರಸಾದ್ ಸ್ವಾಗತಿಸಿದರು. ನಿರ್ದೇಶಕ ಪದ್ಮರಾಜ್ ಪಟ್ಟಾಜೆ ವಂದಿಸಿದರು. ಬದಿಯಡ್ಕ ಕ್ಯಾಂಪ್ಕೊ ರೀಜಿನಲ್ ಮೆನೇಜರ್ ಚಂದ್ರ.ಎಂ ಕಾರ್ಯಕ್ರಮ ನಿರೂಪಿಸಿದರು.
ಕೃಷಿಕರ ಸಲಹೆ ಸೂಚನೆಗಳಿಗೆ ಉತ್ತರ ನೀಡಲಾಯಿತು. ಅಡಿಕೆ ಬೆಲೆಯ ಕುರಿತು, ಹಳದಿ ಚುಕ್ಕೆ ರೋಗ ತಡೆಗಟ್ಟುವ ಬಗ್ಗೆ, ವನ್ಯಮೃಗಗಳ ಹಾವಳಿ ತಡೆಗಟ್ಟುವ ಬಗ್ಗೆ, ಆರೋಗ್ಯ ವಿಮೆ, ಬೆಲೆಯ ತಾರತಮ್ಯಗಳು, ಸಬ್ಸಿಡಿ ಯಂತ್ರ ಮೊದಲಾದ ಪ್ರಶ್ನೆಗಳಿಗೆ ಅಧ್ಯಕ್ಷರು ಉತ್ತರ ನೀಡಿದರು.




