ಕಾಸರಗೋಡು: 'ರಸ್ತೆ ಸುರಕ್ಷತಾ ಮಾಸ-2025' ರ ಅಂಗವಾಗಿ ಕಾಸರಗೋಡು ಪ್ರಾದೇಶಿಕ ಸಾರಿಗೆ ಕಛೇರಿಯ ಆಶ್ರಯದಲ್ಲಿ ಚಾಲಕರಿಗಾಗಿ ರಸ್ತೆ ಸುರಕ್ಷತೆ ಜಾಗೃತಿ ತರಗತಿ ನಡೆಸಲಾಯಿತು. ಬಸ್ ಬಸ್ ನೌಕರರಿಗೆ ಕಾಸರಗೋಡು ಹೊಸ ಬಸ್ ನಿಲ್ದಾಣ ಸನಿಹದ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣ, ಶಾಲಾ ಬಸ್ ಚಾಲಕರಿಗಾಗಿ ಚೆಮ್ಮನಾಡ್ ಜಮಾ ಅತ್ ಹೈಯರ್ ಸೆಕೆಂಡರಿ ಶಾಲೆ, ಟಿಪ್ಪರ್ ಲಾರಿ ಚಾಲಕರಿಗಾಗಿ ಹಾಗೂ ಆಟೋ-ಟ್ಯಾಕ್ಸಿ ಚಾಲಕರಿಗೆ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ತರಗತಿ ಆಯೋಜಿಸಲಾಗಿತ್ತು. ಪ್ರಾದೇಶಿಕ ಸಾರಿಗೆ ಅದಿಕಾರಿ(ಆರ್.ಟಿ.ಓ) ಸಿ.ವಿ. ಪ್ರವೀಣ್, ಎಂ.ವಿ.ಐಗಳಾದ ಶ್ರೀನಿವಾಸನ್, ಟಿ. ಚಂದ್ರಕುಮಾರ್, ಕೆ. ಎ. ಮನೀಶ್ ತರಗತಿ ನಡೆಸಿದರು. ತರಗತಿಯಲ್ಲಿ ಪಾಲ್ಗೊಂಡ ಎಲ್ಲ ಸಇಬ್ಬಂದಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

