ತಿರುವನಂತಪುರಂ: ಪರೀಕ್ಷಾ ಹಾಲ್‍ನಲ್ಲಿ ಶಿಕ್ಷಕರು ಮೊಬೈಲ್ ಪೋನ್‍ಗಳನ್ನು ಹಿಡಿದಿಟ್ಟುಕೊಳ್ಳುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಆದೇಶವು ಹೈಯರ್ ಸೆಕೆಂಡರಿ ಪರೀಕ್ಷಾ ಇಲಾಖೆಗೆ ಸಂಬಂಧಿಸಿದೆ.
ಪೋನ್ ಸ್ವಿಚ್ ಆಫ್ ಆಗಿದ್ದರೂ ಸಹ, ಪರೀಕ್ಷಾ ಹಾಲ್‍ನಲ್ಲಿ ಅದನ್ನು ಇಟ್ಟುಕೊಳ್ಳುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯುವುದು ಇದರ ಗುರಿಯಾಗಿದೆ.
ಪರೀಕ್ಷೆಯನ್ನು ನಿಖರವಾಗಿ ಮತ್ತು ಸುಗಮವಾಗಿ ನಡೆಸುವ ಉದ್ದೇಶದಿಂದ ಮೇಲ್ವಿಚಾರಕರು ಇನ್ನು ಮುಂದೆ ಪರೀಕ್ಷಾ ಹಾಲ್‍ಗೆ ಮೊಬೈಲ್ ಪೋೀನ್‍ಗಳನ್ನು ತರಲು ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪಾಲಕ್ಕಾಡ್‍ನ ಅನಕ್ಕರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೊಬೈಲ್ ಪೋನ್ ವಶಪಡಿಸಿದ್ದಕ್ಕಾಗಿ ಪ್ಲಸ್ ಒನ್ ವಿದ್ಯಾರ್ಥಿಯೊಬ್ಬ ಶಿಕ್ಷಕರ ಮೇಲೆ " ಕೊಲ್ಲು"ವ ಬೆದರಿಕೆ ಹಾಕಿದ ಘಟನೆ ದಿನಗಳ ಹಿಂದೆ ಬೆಳಕಿಗೆ ಬಂದಿತ್ತು..
ಶಾಲೆಗೆ ತರಬಾರದೆಂಬ ಶಾಲೆಯ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಮೊಬೈಲ್ ಫೆÇೀನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಮುಖ್ಯ ಶಿಕ್ಷಕನಿಗೆ ಕೊಲೆ ಬೆದರಿಕೆ ಹಾಕುತ್ತಿರುವ ವಿದ್ಯಾರ್ಥಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು.





