ಮಹಾಕುಂಭನಗರ : ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಮೌನಿ ಅಮಾವಾಸ್ಯೆಗೆ ನಡೆದಿರುವ ಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಭಾನುವಾರ ಪ್ರಯಾಗ್‌ರಾಜ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಹಾಕುಂಭದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಈಗಾಗಲೇ ಭಾಗಿಯಾಗಿದ್ದಾರೆ ಎಂದರು.
ಮಕರ ಸಂಕ್ರಾಂತಿ ಮತ್ತು 'ಪುಷ್ಯ ಪೂರ್ಣಿಮಾ' ದಿನದಂದು ತಮಗೆ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದರು. 'ಸಾಧುಗಳು ಮತ್ತು ಭಕ್ತರಿಗೆ ಅನನುಕೂಲವಾಗದಿರಲಿ ಎಂಬ ಕಾರಣ ಆ ನಿರ್ಧಾರ ತೆಗೆದುಕೊಂಡೆ' ಎಂದಿದ್ದಾರೆ.
'ದೇಶ ಮತ್ತು ವಿದೇಶಗಳಿಂದ ಮಹಾಕುಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಅನೇಕ ವಿದೇಶಿ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಪುಳಕಗೊಂಡಿದ್ದಾರೆ' ಎಂದರು.




.jpg)
