HEALTH TIPS

ಈ ವರ್ಷ ಕ್ವಾಡ್‌ ಶೃಂಗಸಭೆ ಭಾರತದಲ್ಲಿ

ವಾಷಿಂಗ್ಟನ್: ಈ ವರ್ಷ ನಡೆಯಲಿರುವ 'ಕ್ವಾಡ್‌ ನಾಯಕತ್ವ ಶೃಂಗಸಭೆ'ಯ ಆತಿಥ್ಯವನ್ನು ಭಾರತ ವಹಿಸಿಕೊಳ್ಳಲಿದೆ. ಈ ಶೃಂಗಸಭೆ ವರ್ಷಾಂತ್ಯಕ್ಕೆ ನಡೆಯಲಿದೆ.

ಇಲ್ಲಿ ನಡೆದ ಕ್ವಾಡ್‌ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಈ ಕುರಿತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆ ಬಳಿಕ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಆಯೋಜಿಸಿದ್ದ ಈ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್, ಆಸ್ಟ್ರೇಲಿಯಾದ ಪೆನ್ನಿ ವಾಂಗ್, ಜಪಾನ್‌ನ ಇವಯಾ ತಕೇಶಿ ಪಾಲ್ಗೊಂಡಿದ್ದರು. ಅಮೆರಿಕ, ಭಾರತ, ಆಸ್ಟ್ರೇಲಿಯಾ ಹಾಗೂ ಜಪಾನ್‌, ಕ್ವಾಡ್‌ ಸದಸ್ಯ ರಾಷ್ಟ್ರಗಳು.

ಎಚ್ಚರಿಕೆ:ಹಿಂದೂ ಮಹಾಸಾಗರ-ಪೆಸಿಫಿಕ್‌ ಪ್ರದೇಶ ಸೇರಿದಂತೆ ಇತರ ಪ್ರದೇಶಗಳಲ್ಲಿನ ಯಥಾಸ್ಥಿತಿ ಬದಲಾಯಿಸಲು ಯಾವುದೇ ಏಕಪಕ್ಷೀಯ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂಬ ಕಠಿಣ ಸಂದೇಶವನ್ನು ಚೀನಾಕ್ಕೆ ಕ್ವಾಡ್‌ ರಾಷ್ಟ್ರಗಳು ರವಾನಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries