ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಅಮೆರಿಕನ್ ಮಾಜಿ ಪತ್ರಕರ್ತ ಕುಶ ದೇಸಾಯಿ ಅವರನ್ನು ತಮ್ಮ ಉಪ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ದೇಸಾಯಿ ಅವರು ಕಳೆದ ವರ್ಷ ಅಧ್ಯಕ್ಷೀಯ ಚುನಾವಣೆ ಅಂಗವಾಗಿ ನಡೆದಿದ್ದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದ ಉಪ ಸಂವಹನ ನಿರ್ದೇಶಕರಾಗಿ ಮತ್ತು ರಿಪಬ್ಲಿಕನ್ ಪಕ್ಷದ ಆಯೋವಾ ಘಟಕದ ಸಂವಹನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಚುನಾವಣೆ ಸಂದರ್ಭದಲ್ಲಿ, ರಿಪಬ್ಲಿಕನ್ ಪಕ್ಷ ಹಾಗೂ ಟ್ರಂಪ್ ಪರ ಜನಾಭಿಪ್ರಾಯ ಮೂಡಿಸುವಲ್ಲಿ ದೇಸಾಯಿ ಮಹತ್ವದ ಪಾತ್ರ ವಹಿಸಿದ್ದರು.




