ಮಾವೇಲಿಕ್ಕರ: ಶಾಲೆಗಳ ಶಿಕ್ಷಣವು ರಾಷ್ಟ್ರೀಯ ಭದ್ರತೆಯನ್ನು ಆಧರಿಸಿರಬೇಕು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅವರು ನಿನ್ನೆ ಮಾವೇಲಿಕ್ಕರ ವಿದ್ಯಾಧಿರಾಜ ವಿದ್ಯಾಪೀಠಂ ಸೈನಿಕ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಆಧ್ಯಾತ್ಮಿಕ, ಮೌಲ್ಯಾಧಾರಿತ ಮತ್ತು ದೇಶಭಕ್ತಿಯ ಶಿಕ್ಷಣವನ್ನು ನೀಡದಿದ್ದರೆ, ಮುಂದಿನ ಪೀಳಿಗೆ ಅಪಾಯಕರವಾಗುತ್ತದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಭದ್ರತೆಯು ಶಿಕ್ಷಣಕ್ಕೆ ಸಂಬಂಧಿಸಿದೆ ಎಂದು ತಜ್ಞರು ನಂಬುತ್ತಾರೆ. ಮಿಲಿಟರಿ ಶಾಲೆಗಳಲ್ಲಿ ಅಧ್ಯಯನ ಮಾಡಿ ಪದವಿ ಪಡೆಯುವ ಮಕ್ಕಳು ಸೈನಿಕರ ಎಲ್ಲಾ ಶಿಸ್ತು ಮತ್ತು ದೇಶದ ಸಾಂಸ್ಕøತಿಕ ಮತ್ತು ಕೆಚ್ಚೆದೆಯ ಸಂಪ್ರದಾಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ವಿದ್ಯಾಧಿರಾಜ ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿ ಎಂ.ಎನ್. ಶಶಿಧರನ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಉಪಾಧ್ಯಕ್ಷ ಜಯಪ್ರಕಾಶ್ ವಲ್ಯತ್ತಾನ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಟ್ರಸ್ಟ್ ಕಾರ್ಯದರ್ಶಿ ವಿ. ಅನಿಲ್ ಕುಮಾರ್ ಕೇಂದ್ರ ಸಚಿವರನ್ನು ಸನ್ಮಾನಿಸಿ ಗೌರವಿಸಿದರು. ಮಾವೇಲಿಕ್ಕರ ನಗರಸಭೆ ಅಧ್ಯಕ್ಷ ಕೆ.ವಿ. ಶ್ರೀಕುಮಾರ್, ಆರ್‍ಎಸ್‍ಎಸ್ ದಕ್ಷಿಣ ಕೇರಳ ಪ್ರಾಂತ್ಯ ಸಂಘಚಾಲಕ್ ಪ್ರೊ. ಎಂ. ರಮೇಶನ್, ಭಾರತೀಯ ವಿದ್ಯಾನಿಕೇತನ ರಾಜ್ಯಾಧ್ಯಕ್ಷ ಗೋಪಾಲನ್ ಕುಟ್ಟಿ ಮಾಸ್ತರ್, ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್, ಶಾಲಾ ಕಲ್ಯಾಣ ಮಂಡಳಿ ಅಧ್ಯಕ್ಷ ಎಚ್. ಮೇಘನಾಥನ್, ಪಿಟಿಎ ಸಮಿತಿ ಅಧ್ಯಕ್ಷೆ ಧನ್ಯಾ ರಂಜಿತ್, ಶಾಲಾ ಪ್ರಾಂಶುಪಾಲ ಡಾ. ಬಿ. ಸಂತೋಷ್ ಮಾತನಾಡಿದರು.





