ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಂಟಿ ಧರಣಿ ಸಮಿತಿ ನೇತೃತ್ವದಲ್ಲಿ ಪಡಿತರ ಅಂಗಡಿ ಮಾಲಿಕರು ಕೆಲಕಾಲ ಅಂಗಡಿ ಮುಚ್ಚಿ ಪ್ರತಿಭಟನೆ ನಡೆಸಿದರು. ಮುಷ್ಕರದ ಅಂಗವಾಗಿ ಕಾಸರಗೋಡು ತಾಲೂಕು ನಾಗರಿಕ ಪೂರೈಕೆ ಇಲಾಖೆ ಕಛೇರಿ ಎದುರು ಧರಣಿ ಆಯೋಜಿಸಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಕಾಲ ವೇತನ ಪರಿಷ್ಕರಣೆಗಾಗಿ ಧರನಿ ನಡೆಸಲಾಯಿತು.
ಜಂಟಿ ಮುಷ್ಕರ ಸಮಿತಿ ರಕ್ಷಾಧಿಕಾರಿ ಶಂಕರ್ ಬೆಳ್ಳಿಗೆ ಧರಣಿ ಉದ್ಘಾಟಿಸಿದರು. ಪಡಿತರ ವರ್ತಕರ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಬೇಕು, ಬಾಕಿ ಇರುವ ಎಲ್ಲ ಕೂಲಿಯನ್ನು ತಕ್ಷಣ ನೀಡಬೇಕು, ಕೇಂದ್ರ ಸರ್ಕಾರ ನೇರ ಪಾವತಿ ವ್ಯವಸ್ಥೆಯನ್ನು ಹಿಂಪಡೆಯಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಡಿತರ ವರ್ತಕರು ಧರಣಿ ನಡೆಸಿದರು. ಎಕೆಆರ್‍ಆರ್‍ಡಿಎ ಕಾಸರಗೋಡು ತಾಲೂಕು ಸಮಿತಿ ಅಧ್ಯಕ್ಷ ಸತೀಶನ ಇಡವೇಲಿ ಅಧ್ಯಕ್ಷತೆ ವಹಿಸಿದ್ದರು. ವಿಜಯನ್ ನಾಯರ್, ರವಿ ಕೀಯೂರ್, ವಸಂತ ಶೆಣೈ, ಪ್ರದೀಪ್ ಮಡಕ್ಕಲ್, ಇ.ಕೆ.ಅಬ್ದುಲ್ಲ ಉಪಸ್ಥೀತರಿದ್ದರು. ಆರ್‍ಡಿಎ ತಾಲೂಕು ಕಾರ್ಯದರ್ಶಿ ಪಿ.ಎ.ಅಬ್ದುಲ್ ಗಫೂರ್ ಸ್ವಾಗತಿಸಿದರು. ರಮೇಶ ಕೊಟ್ಟೂರು ವಂದಿಸಿದರು.




