ಕೊಚ್ಚಿ: ಚೋಟಾನಿಕರ ಪೋಕ್ಸೋ ಪ್ರಕರಣದ ಕಿರುಕುಳಕ್ಕೊಳಗಾದ ಸಂತ್ರಸ್ತ್ಥೆ ಬಾಲಕಿ ಸಾವನ್ನಪ್ಪಿದ್ದಾಳೆ. ಪುರುಷ ಸ್ನೇಹಿತನಿಂದ ಹಲ್ಲೆಗೊಳಗಾದ ಬಾಲಕಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಔಷಧಿಗೆ ಸ್ಪಂದಿಸದ ಬಾಲಕಿ ಆರು ದಿನ ವೆಂಟಿಲೇಟರ್‌ನಲ್ಲಿದ್ದಳು.
ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆರೋಪಿ ಅನೂಪಿನಾಥ್ ವಿರುದ್ಧ ಕೊಲೆ ಆರೋಪ ಹೊರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ ಮನೆಯೊಳಗೆ ಬಾಲಕಿಯ ಕುತ್ತಿಗೆಗೆ ಹಗ್ಗ ಮತ್ತು ಕೈಗೆ ಗಾಯಗಳಾಗಿವೆ. ಅವಳು ಅರೆ ಅರೆಬೆತ್ತಲೆಯಾಗಿ ನೆಲದ ಮೇಲೆ ಬಿದ್ದ ಸ್ತ್ಥಿತಿಯಲ್ಲಿ ಪತ್ತೆಯಾಗಿದ್ದಳು. ತೋಳಿನ ಮೇಲಿನ ಗಾಯ ಕಂಡುಬಂದಿತ್ತು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಅನೂಪ್ ನನ್ನು ಬಂಧಿಸಲಾಗಿದೆ.
ಅನೂಪ್ ಬಾಲಕಿಗೆ ಅಮಾನುಷವಾಗಿ ಥಳಿಸಿದ್ದಾನೆ. ಬಾಲಕಿಯ ತಲೆಯನ್ನು ಗೋಡೆಗೆ ಹೊಡೆದು ಉಸಿರುಗಟ್ಟಿಸಲು ಯತ್ನಿಸಿದ್ದಾನೆ. ಬಾಲಕಿಯನ್ನು ಸಾಯಬೇಕೇ ಎಂದು ಕೇಳಿದ್ದಾಗಿಯೂ ಪೊಲೀಸರು ತಿಳಿಸಿದ್ದಾರೆ. ಇದಾದ ಬಳಿಕ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಾಲಕಿ ಶಾಲಿಗೆ ನೇಣು ಬಿಗಿದುಕೊಂಡು ಸಾಯುವುದಾಗಿ ಬೆದರಿಕೆ ಹಾಕಿ ನೇಣು ಬಿಗಿದಿದ್ದು, ಅನೂಪ್ ಶಾಲು ಕತ್ತರಿಸಿದ್ದಾನೆ. ಆ ನಂತರವೂ ಅನೂಪ್ ಬಾಲಕಿಗೆ ಕಿರುಕುಳ ನೀಡಿದ್ದು, ಬಳಿಕ ಆಕೆ ಸತ್ತಿದ್ದಾಳೆ ಎಂದು ಭಾವಿಸಿ ಪರಾರಿಯಾಗಿದ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಮೂಲಕ ಆರೋಪಿಯೊಂದಿಗೆ ಹುಡುಗಿ ಸ್ನೇಹ ಬೆಳೆಸಿದ್ದಳು. ಬಾಲಕಿ ವಾಸಿಸುತ್ತಿದ್ದ ಚೋಟಾನಿಕರದ ಮನೆಗೆ ಆಗಾಗ ಬರುತ್ತಿದ್ದ. ಹುಡುಗಿ ತನ್ನ ತಾಯಿಯೊಂದಿಗೆ ಚೆನ್ನಾಗಿ ಹೊಂದಿಕೊಳ್ಳಲಿಲ್ಲ. ತಾಯಿ ಪ್ರತ್ಯೆಕಗೊಂಡು ಬೇರೆ ಕ್ವಾರ್ಟರ್‌ನಲ್ಲಿ ಉಳಿದುಕೊಂಡಿದ್ದರು. ಬಾಲಕಿ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದಳು.
ಚೋಟಾನಿಕರ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆಗೆತ್ನಿಸಿದ ಬಾಲಕಿ ಮೃತ್ಯು:ಆರೋಪಿ ಅನುಪ್ ಮೇಲೆ ಕೊಲೆ ಆರೋಪ ಹೊರಿಸಲಿರುವ ಪೊಲೀಸರು
0
ಜನವರಿ 31, 2025
Tags




