ಪ್ಯಾರಿಸ್: 'ನ್ಯಾಷನಲ್ ಫ್ರಂಟ್' ರಾಜಕೀಯ ಪಕ್ಷದ ಸಂಸ್ಥಾಪಕ, ಬಲಪಂಥೀಯ ನಾಯಕ ಜಾನ್-ಮೇರಿ ಲೆ ಪೆನ್ (96) ಅವರು ಮೃತಪಟ್ಟಿದ್ದಾರೆ. ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಪಕ್ಷವು ಮಂಗಳವಾರ ತಿಳಿಸಿದೆ.
ವಲಸೆ ಮತ್ತು ಬಹುಸಂಸ್ಕೃತಿಯ ಕಟು ವಿರೋಧಿಯಾಗಿದ್ದ ಪೆನ್ ಅವರು ನಿಷ್ಠಾವಂತ ಬೆಂಗಲಿಗರ ಜೊತೆಜೊತೆಗೆ ಸಾಕಷ್ಟು ಟೀಕಾಕಾರರನ್ನೂ ಹೊಂದಿದ್ದರು.
ಸಾಮೂಹಿಕ ಹತ್ಯಾಕಾಂಡ ಸೇರಿದಂತೆ ಹಲವು ವಿವಾದಾತ್ಮಕ ಹೇಳಿಕೆಗಳು ಪೆನ್ ಅವರ ರಾಜಕೀಯ ಮೈತ್ರಿಯನ್ನು ಕೆಡಿಸಿತ್ತು.
ಪೆನ್ ಅವರು 2002ರಲ್ಲಿ ಅಧ್ಯಕ್ಷೀಯ ಚುನಾವಣೆಯ ಎರಡನೇ ಹಂತದವರೆಗೂ ಪ್ರವೇಶಿಸಿದ್ದರು. ಆದರೆ ಪುತ್ರಿಯೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯವು ಅವರನ್ನು ಹಿಂದಕ್ಕೆ ತಳ್ಳಿತು. ಪುತ್ರಿ ಮೇರಿ ಲೆ ಪೆನ್ ಅವರು ನ್ಯಾಷನಲ್ ಫ್ರಂಟ್ ಪಕ್ಷದ ಹೆಸರನ್ನು ಬದಲಾಯಿಸಿದರು. ಪಕ್ಷದಿಂದ ಪೆನ್ ಅವರನ್ನು ಕಿತ್ತೆಸೆದರು. ಪಕ್ಷವನ್ನು ಫ್ರಾನ್ಸ್‌ನ ಅತ್ಯಂತ ಬಲಿಷ್ಠ ಪಕ್ಷವಾಗಿ ಮಾರ್ಪಡಿಸಿದರು.




