ಮಂಜೇಶ್ವರ: ಕುಳೂರು ಆದರ್ಶ ನಗರದ ಶ್ರೀ ಹರಿ ಭಜನಾ ಮಂದಿರದ ಸ್ವರ್ಣ ಲೇಪಿತ ರಜತ ಚಿತ್ರ ಫಲಕ ಪ್ರತಿಷ್ಠಾ ಮಹೋತ್ಸವು ಕೊಂಡೆವೂರು ಶ್ರೀ ಯೋಗಾದ ಸರಸ್ವತಿ ಸ್ವಾಮೀಜಿ ಮತ್ತು ಕುಳೂರು ಬೀಡು ಕೆ ದಾಸಣ್ಣ ಆಳ್ವ ಇವರ ಮಾರ್ಗದರ್ಶನದಲ್ಲಿ ಹರಿನಾರಾಯಣ ಕಲ್ಯಾಣತ್ತಾಯ ಇವರ ಉಪಸ್ಥಿತಿಯಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ರಾಮಪ್ರಸಾದ ನಲ್ಲೂರಾಯ ಉರ್ಮಿ ಇವರ ಪೌರೋಹಿತ್ಯದಲ್ಲಿ ಜರಗಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭೆ ಕೊಡುಗೈ ದಾನಿ, ಮಂದಿರದ ಗೌರವಾಧ್ಯಕ್ಷ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಒಡಿಯೂರು ಗುರುದೇವದತ್ತ ಸಂಸ್ಥಾನಂ ನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಭಜನಾ ಮಂದಿರಗಳು ಭಕ್ತನ ಮತ್ತು ಭಕ್ತಿಯ ಕೇಂದ್ರವಾಗಿದ್ದು ಭಜನೆಗಳು ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುತ್ತದೆ. ಎಲ್ಲಿ ಹರಿಯಿದ್ದನೋ ಅಲ್ಲಿ ಬೆಳಕಿದೆ ಎಂದು ಆಶೀರ್ವಚನ ನೀಡಿದರು.
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂದಿರದ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ ಇವರನ್ನು ಮಂದಿರದ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಂದಿರದ ಗೌರವ ಸಲಹೆಗಾರ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟತ್ತೋಡಿ, ಕರ್ನಾಟಕÀದ ಮಾಜಿ ಸಚಿವ ರಮಾನಾಥ ರೈ ಬಂಟ್ವಾಳ, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ದ.ಕ ಜಿಲ್ಲಾ ಕಂಬಳ ಸಮಿತಿ ಮಾಜಿ ಅಧ್ಯಕ್ಷ ಪೊಯ್ಯೇಲು ಪಿ. ಆರ್ ಶೆಟ್ಟಿ, ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ, ಪಟ್ಲ ಫೌಂಡೇಶನ್ ಉಪ್ಪಳ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಡಾ. ಸಂದೀಪ್ ಹೆಗ್ಡೆ ಕುಳೂರು ಬೀಡು,ಮಂದಿರದ ಸಂಚಾಲಕ ಮೋಹನ್ ಶೆಟ್ಟಿ ಮಜ್ಜಾರು, ಅಂಬಾರು ಸದಾಶಿವ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕೃಷ್ಣಪ್ಪ ಪೂಜಾರಿ ದೇರಂಬಳ, ಪ್ರಸಂಗಕರ್ತ ಯೋಗೀಶ್ ರಾವ್ ಚಿಗುರುಪಾದೆ ಉಪಸ್ಥಿತರಿದ್ದರು. ಮಂದಿರದ ಕಾರ್ಯಾಧ್ಯಕ್ಷ ನಾರಾಯಣ ನಾಯ್ಕ್ ನಡುಹಿತ್ಲು ಸ್ವಾಗತಿಸಿದರು. ಕಾರ್ಯದರ್ಶಿ ಪ್ರಮೋದ್ ಶೆಟ್ಟಿ ವಂದಿಸಿದರು. ಅಂಗಡಿದಾರು ಜಯಪ್ರಕಾಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರಗಿತು. ಸಾಂಸ್ಕøತಿಕ ಕಾರ್ಯಕ್ರಮದ ಭಾಗವಾಗಿ ಪಟ್ಲ ಫೌಂಡೇಶನ್ ಉಪ್ಪಳ ಘಟಕದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಹರಿ ಲೀಲೆ ಯಕ್ಷಗಾನ ಬಯಲಾಟ ನಡೆಯಿತು.

.jpg)
