HEALTH TIPS

ಪೊನ್ನಂಬಲ ಬೆಟ್ಟದಲ್ಲಿ ಬೆಳಗಿದ ಮಕರ ಬೆಳಕು -ಲಕ್ಷಾಂತರ ಜನರಿಂದ ವೀಕ್ಷಣೆ: ಸಮಗ್ರ ಮಾಹಿತಿ

ಶಬರಿಮಲೆ: ಶಬರಿಮಲೆಯಲ್ಲಿ ಮಂಗಳವಾರ ಮುಸ್ಸಂಜೆ ಲಕ್ಷಾಂತರ ಅಯ್ಯಪ್ಪ ಭಕ್ತರು ಮಕರ ಜ್ಯೋತಿ ವೀಕ್ಷಿಸಿ ಪುನೀತರಾದರು. ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಬೆಳಗ್ಗಿನಿಂದಲೇ  ಶಬರಿಮಲೆಯಲ್ಲಿ ಭಕ್ತರು ಜಮಾಯಿಸಿದ್ದರು. ಪೆÇನ್ನಂಬಲ ಮೇಡ್ ಬೆಟ್ಟದಲ್ಲಿ ಮೂರು ಭಾರಿ ಮಕರ ಜ್ಯೋತಿ ಬೆಳಗುತ್ತಿದ್ದಂತೆ `ಶರಣಂ ಅಯ್ಯಪ್ಪ' ಘೋಷಣೆ ಮುಗಿಲು ಮುಟ್ಟಿತು. ಶಬರಿಮಲೆ, ನೀಲಕ್ಕಲ್, ಪಂಬಾದಲ್ಲಿ ಲಕ್ಷಾಂತರ ಅಯ್ಯಪ್ಪ ಭಕ್ತರು ಜಮಾಯಿಸಿ ಮಕರ ಜ್ಯೋತಿ ವೀಕ್ಷಿಸಿ ಧನ್ಯರಾದರು. ಜ.17 ರ ವರೆಗೆ ತಿರುವಾಭರಣಂ ದರ್ಶಿಸಬಹುದು. 


ಮಕರ ಜ್ಯೋತಿ ಉತ್ಸವದ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದಲ್ಲಿ ಉತ್ಸವದ ಭದ್ರತೆ ಮತ್ತು ಸುಗಮ ನಿರ್ವಹಣೆಗಾಗಿ 5000 ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಯಾತ್ರಿಕರ ಹರಿವನ್ನು ನಿರ್ವಹಿಸಲು ಮತ್ತು ಧಾರ್ಮಿಕ ಕಾರ್ಯಕ್ರಮದ ಸಮಯದಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೆÇಲೀಸರು ಬಿಗು ಬಂದೋಬಸ್ತು ಮಾಡಿದ್ದರು. 


ಜ.13 ರಂದು ಪಂದಳಂ ದೇವಸ್ಥಾನದಿಂದ ಶಬರಿಮಲೆಗೆ ಹೊರಟ ಪವಿತ್ರ ತಿರುವಾಭರಣಂ(ಅಯ್ಯಪ್ಪನ ಆಭರಣ) ಹೊತ್ತ ವಾರ್ಷಿಕ ಮೆರವಣಿಗೆ ಮಂಗಳವಾರ ಸಂಜೆ  ತಲುಪಿತು. ಆ ಬಳಿಕ ಅಯ್ಯಪ್ಪ ದೇವರಿಗೆ ಚಿನ್ನಾಭರಣ ಅಲಂಕರಿಸಲಾಯಿತು. ಸನ್ನಿಧಾನಕ್ಕೆ ತಲುಪಿದ ಆಭರಣಕ್ಕೆ ಸನ್ನಿಧಾನದಲ್ಲಿ ಭಕ್ತಿ ನಿರ್ಭಯವಾದ ಸ್ವಾಗತ ನೀಡಲಾಯಿತು. ನಂತರ ಶ್ರೀ ಕ್ಷೇತ್ರ ತಂತ್ರಿವರ್ಯ ಕಂಠಾರರ್ ರಾಜೀವರ್ ಮತ್ತು ಮುಖ್ಯ ಅರ್ಚಕರಾದ ಅರುಣ್ ಕುಮಾರ್ ನಂಬೂದಿರಿ ನೇತೃತ್ವದ ಅರ್ಚಕರ ತಂಡ ಅದನ್ನು ಸ್ವೀಕರಿಸಿ ಶ್ರೀ ಕ್ಷೇತ್ರದ ಗರ್ಭಗುಡಿಗೆ ಸಾಗಿಸಿದ ಬಳಿಕ ಶ್ರೀ ಅಯ್ಯಪ್ಪ ಸ್ವಾಮಿಗೆ ಅಲಂಕರಿಸಲಾಯಿತು.  


ಶಬರಿಮಲೆಯ ಎಲ್ಲಾ ವೀಕ್ಷಣಾ ಸ್ಥಳಗಳು ಯಾತ್ರಿಕರಿಂದ ತುಂಬಿದ್ದವು.  ಮಕರ ಬೆಳಕು ದರ್ಶನ ಸಾಧ್ಯವಿರುವ ಎಲ್ಲ ಸ್ಥಳಗಳಲ್ಲಿ ಆಗಲೇ ಪರ್ಣಶಾಲೆಗಳು ಭರ್ತಿಯಾಗಿದ್ದವು.  ಕಳೆದ ಎರಡು ದಿನಗಳಿಂದ ಭೇಟಿ ನೀಡಿದ್ದ ಯಾತ್ರಾರ್ಥಿಗಳು ಬೆಟ್ಟದಿಂದ ಇಳಿಯದೆ ಪರ್ಣಶಾಲೆಯಲ್ಲಿ ಕಾಯುತ್ತಿದ್ದರು.

ಶಬರಿಮಲೆ, ನಿಲಕ್ಕಲ್, ಪಂಪಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 5000 ಪೆÇಲೀಸರು ಭದ್ರತೆಯನ್ನು ಒದಗಿಸಿದ್ದರು.  ಶಬರಿಮಲೆಗೆ ಮಂಗಳವಾರ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಯಾತ್ರಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು.  ತಿರುವಾಭರಣ ಪಂಪಾದಿಂದ ಸನ್ನಿಧಾನಕ್ಕೆ ಮೆರವಣಿಗೆ ಬರುತ್ತಿದ್ದರಿಂದ ಮಧ್ಯಾಹ್ನದ ನಂತರ ಭಕ್ತರಿಗೆ ನಿಬರ್ಂಧ ಹೇರಲಾಗಿತ್ತು.

ಮಕರ ಬೆಳಕು ದರ್ಶನದ ನಂತರ ಬೆಟ್ಟದಿಂದ ಇಳಿಯುವ ಭಕ್ತರು ಪೋಲೀಸರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಈ ತಿಂಗಳ 17 ರವರೆಗೆ ತಿರುವಾಭರಣ ದರ್ಶನವನ್ನು ಪ್ರತಿಯೊಬ್ಬ ಭಕ್ತರು ಪಡೆಯಲು ಅವಕಾಶವಿದೆ.


ಪಂದಳಂನ ವಲಿಯ ಕೋಯಿಕಲ್ ಅರಮನೆಯಿಂದ ಬಂದ  ತಿರುವಭಾರಣಂ ಮೆರವಣಿಗೆಗೆ ಸಂಜೆ 5.30 ಕ್ಕೆ ಸಾರಂಕುತಿಯಲ್ಲಿ ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿ ಬಿ.ಮುರಾರಿ ಬಾಬು ನೇತೃತ್ವದ ತಂಡ ಸ್ವಾಗತಿಸಿದರು. 18ನೇ ಮೆಟ್ಟಿಲು ತಲುಪಿದ ತಿರುವಾಭರಣ ಮೆರವಣಿಗೆಯನ್ನು ಸಹಕಾರ ಮತ್ತು ದೇವಸ್ವಂ ಇಲಾಖೆ ಸಚಿವ ವಿ.ಎನ್. ವಾಸವನ್ ಅವರು 6.30ಕ್ಕೆ ಧ್ವಜಸ್ತಂಭದ ಕೆಳಗೆ ಸ್ವಾಗತಿಸಿದರು. ತಮಿಳುನಾಡು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಪಿ.ಕೆ. ಶೇಖರ್ ಬಾಬು, ಸಂಸದ ವಿ.ಕೆ. ಶ್ರೀಕಂಠನ್, ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್, ಶಾಸಕರಾದ ಪ್ರಮೋದ್ ನಾರಾಯಣನ್, ವಕೀಲ. ಕೆ.ಯು. ಜನೀಶ್‍ಕುಮಾರ್, ರಾಹುಲ್ ಮಂಗ್‍ಕೂಟತ್ತಿಲ್, ಪತ್ತನಂತಿಟ್ಟ ಜಿಲ್ಲಾಧಿಕಾರಿ ಎಸ್. ಪ್ರೇಮಕೃಷ್ಣನ್, ದೇವಸ್ವಂ ಮಂಡಳಿ ಸದಸ್ಯರಾದ ಎ. ಅಜಿಕುಮಾರ್, ಜಿ. ಸುಂದರೇಶನ್, ಅಧಿಕಾರಿಗಳು ಮತ್ತು ಇತರರು ತಿರುವಾಭರಣ ಬರಮಾಡಿಕೊಂಡರು. ತಿರುವಾಭರಣ ಪೆಟ್ಟಿಗೆಯನ್ನು  18 ನೇ ಮೆಟ್ಟಿಲು ದ್ವಾರದ ಮೂಲಕ ಸೋಪಾನಕ್ಕೆ ತಂದಾಗ, ಅದನ್ನು ಶಬರಿಮಲೆ ತಂತ್ರಿ ಕಂಠಾರರ್ ್ರಬ್ರಹ್ಮದತ್ತನ್ ಮತ್ತು ಮೇಲ್ಶಾಂತಿ ಎಸ್. ಅರುಣ್‍ಕುಮಾರ್ ನಂಬೂದಿರಿ ಪಡೆದುಕೊಂಡರು. ತಿರುವಾಭರಣವನ್ನು ದೇವಾಲಯಕ್ಕೆ ತಂದ ನಂತರ, ದೀಪ ಪೂಜೆಗಾಗಿ ದೇವಾಲಯವನ್ನು ಮುಚ್ಚಲಾಯಿತು. ಸಂಜೆ ದೀಪ ಪೂಜೆಯ ಸಮಯದಲ್ಲಿ ಅಯ್ಯಪ್ಪನ ತಂದೆ ಪೂರ್ವಜರಾದ ಪಂದಳಂ ರಾಜನು ಮಾಡಿದ ಆಭರಣಗಳನ್ನು ಅಯ್ಯಪ್ಪ ಸ್ವಾಮಿಗೆ ಅಲಂಕರಿಸಲಾಯಿತು.

ಈ ಸಮಯದಲ್ಲಿ ಪೆÇನ್ನಂಬಲಮೇಡುವಿನಲ್ಲಿ ಮಕರ ಜ್ಯೋತಿ ಗೋಚರಿಸಿತು. ಈ ಬಾರಿ ಸನ್ನಿಧಾನಂನಲ್ಲಿ ಮಕರವಿಳಕ್ಕು ದರ್ಶನವು ಮೋಡ ಕವಿದ ವಾತಾವರಣದಲ್ಲಿ, ಲಘುವಾದ ತುಂತುರು ಮಳೆಯೊಂದಿಗೆ ನಡೆಯಿತು. ನಂತರ ತಿರುವಾಭರಣ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಯಿತು.  ಜನವರಿ 17 ರವರೆಗೆ ತಿರುವಾಭರಣ ಧರಿಸಿದ ಸ್ವಾಮಿಯ ದರ್ಶನ ಪಡೆಯಬಹುದು. ಪೆಂಡಾಲ್‍ಗಳಲ್ಲಿ ಇರಿಸಲಾದ ಪವಿತ್ರ ವಸ್ತುಗಳನ್ನು ಮೂರು ಪೆಟ್ಟಿಗೆಗಳಲ್ಲಿ ಇರಿಸಿ, ಮಕರವಿಳಕ್ಕು ಹಬ್ಬಕ್ಕಾಗಿ ಕಾಲ್ನಡಿಗೆಯಲ್ಲಿ ಶಬರಿಮಲೆಗೆ ತರಲಾಯಿತು.

ಮಕರ ಸಂಕ್ರಮಣ ಪೂಜೆಯು ಬೆಳಿಗ್ಗೆ 8.45 ಕ್ಕೆ, ಮಕರ ಸಂಕ್ರಮಣ ಮುಹೂರ್ತಕ್ಕೆ ನಡೆಯಿತು. ತಿರುವಾಂಕೂರು ಅರಮನೆಯಿಂದ ತಂದ ತುಪ್ಪದಿಂದ ಅಬಿಷೇೀಕವನ್ನು ಮಾಡಲಾಯಿತು. ದೀಪಾರಾಧನೆಗಾಗಿ ದೇವಾಲಯವು ಸಂಜೆ 4.50 ಕ್ಕೆ ತೆರೆಯಲ್ಪಟ್ಟಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries