HEALTH TIPS

ತಮಿಳುನಾಡು | ನಟ ಸತ್ಯರಾಜ್ ಪುತ್ರಿ ದಿವ್ಯಾ ಡಿಎಂಕೆಗೆ

 ಚೆನ್ನೈ: ನಟ ಸತ್ಯರಾಜ್‌ ಅವರ ಪುತ್ರಿ ದಿವ್ಯಾ ಅವರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಸಮ್ಮುಖದಲ್ಲಿ ಭಾನುವಾರ ಆಡಳಿತಾರೂಢ ಡಿಎಂಕೆಗೆ ಸೇರ್ಪಡೆಗೊಂಡರು.

'ನನ್ನ ಜೀವನದ ಪ್ರಮುಖ ಅಧ್ಯಾಯವೊಂದು ಆರಂಭಗೊಂಡಿದೆ. ನಮ್ಮ ಜನರ ಪ್ರಗತಿಗಾಗಿ ನಿಸ್ವಾರ್ಥವಾಗಿ ಕೆಲಸ ಮಾಡಲು ತಮಿಳುನಾಡಿನ ಹೆಮ್ಮೆಯ ಮಗಳಾಗಿ ನಾನು ಈ ಹೊಸ ಪಯಣ ಆರಂಭಿಸುವೆ' ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ದಿವ್ಯಾ ಬರೆದಿದ್ದಾರೆ.

ಡಿಎಂಕೆ ಸಂಸದ ಟಿ.ಆರ್‌. ಬಾಲು, ಸಚಿವರಾದ ಪಿ.ಕೆ. ಶೇಖರ್ ಬಾಬು, ಕೆ.ಎನ್‌. ನೆಹರು ಪಕ್ಷ ಸೇರ್ಪಡೆ ಸಂದರ್ಭ ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries