ಬೆಂಗಳೂರು: ತೆಂಗಿನಕಾಯಿ ಉತ್ಪಾದನೆಯಲ್ಲಿ ಕರ್ನಾಟಕ ಕೇರಳವನ್ನು ಹಿಂದಿಕ್ಕಿದೆ. ದಕ್ಷಿಣ ಭಾರತದ ಕರ್ನಾಟಕ ರಾಜ್ಯವು ದೇಶದ ತೆಂಗಿನಕಾಯಿ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿದೆ. 2016 ರಿಂದೀಚೆಗೆ ಅತಿ ಹೆಚ್ಚು ತೆಂಗಿನಕಾಯಿ ಉತ್ಪಾದಿಸುತ್ತಿರುವ ರಾಜ್ಯ ಇದಾಗಿದೆ.
ಕೇಂದ್ರದ ತೆಂಗು ಅಭಿವೃದ್ಧಿ ಮಂಡಳಿ (ಸಿಡಿಬಿ) ಪ್ರಕಾರ, ಕರ್ನಾಟಕವು 2022-2023 ರಲ್ಲಿ 595 ಕೋಟಿ ತೆಂಗಿನಕಾಯಿಗಳನ್ನು ಉತ್ಪಾದಿಸಿದೆ. 563 ಕೋಟಿಗಳೊಂದಿಗೆ ಕೇರಳ ನಂತರದ ಸ್ಥಾನದಲ್ಲಿದೆ. 2021-22ರಲ್ಲಿ ಕೇರಳ 552 ಕೋಟಿ ತೆಂಗಿನಕಾಯಿ ಮತ್ತು ಕರ್ನಾಟಕ 518 ಕೋಟಿ ತೆಂಗಿನಕಾಯಿ ಉತ್ಪಾದಿಸಿದೆ.
2023-24ರ ಮೊದಲ ಎರಡು ತ್ರೈಮಾಸಿಕಗಳಿಗೆ ಸಿಡಿಬಿ ಯ ತಾತ್ಕಾಲಿಕ ಅಂದಾಜಿನ ಪ್ರಕಾರ, ಕೇರಳವು ತುಂಬಾ ಹಿಂದುಳಿದಿದೆ. ತೆಂಗಿನಕಾಯಿ ಉತ್ಪಾದನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, 726 ಕೋಟಿ ರೂ., ತಮಿಳುನಾಡು ಎರಡನೇ ಸ್ಥಾನದಲ್ಲಿದೆ (578 ಕೋಟಿ ರೂ.). ಕೇರಳ 564 ಕೋಟಿ ರೂ.ಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಭಾರತದ ತೆಂಗಿನಕಾಯಿ ಉತ್ಪಾದನೆಯಲ್ಲಿ ಕರ್ನಾಟಕವು ಶೇಕಡಾ 28.5 ರಷ್ಟು ಕೊಡುಗೆ ನೀಡುತ್ತಿದೆ. ಕರ್ನಾಟಕವು ಕೊಬ್ಬರಿ ಉತ್ಪಾದನೆಯಲ್ಲೂ ಕೇರಳವನ್ನು ಮೀರಿಸಿದೆ.





