ಕಾಸರಗೋಡು: ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನವೀನ ನೀರಾವರಿ ವಿಧಾನಗಳನ್ನು ಪೆÇ್ರೀತ್ಸಾಹಿಸುವಿಕೆ, ನೀರಿನ ದಕ್ಷತೆಯ ಹೆಚ್ಚಿಸುವಿಕೆ,ಹೆಚ್ಚಿನ ಉತ್ಪಾದನೆಯನ್ನು ಖಾತ್ರಿಪಡಿಸುವ ಗುರಿಯೊಂದಿಗೆ ಕೃಷಿ ಇಲಾಖೆಯಿಂದ ಜಾರಿಗೆ ತಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್.ಕೆ.ವಿ.ವೈ- ಪಿ.ಡಿ.ಎಂ.ಎಸ್) 2024-25 ಯೋಜನೆಯ ಮೂಲಕ ಡ್ರಿಪ್ಪ್ ಕೃಷಿ ಸ್ಥಳಗಳಲ್ಲಿ ಸಬ್ಸಿಡಿ ಅಳವಡಿಕೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಸಣ್ಣ ರೈತರಿಗೆ ಯೋಜನಾ ವೆಚ್ಚದ ಮಂಜೂರಾದ ಮೊತ್ತದ 55 ಶೇಕಡಾ ಮತ್ತು ಇತರ ರೈತರಿಗೆ ಯೋಜನೆಯ ವೆಚ್ಚದ ಶೇ.45ರಷ್ಟು ಯೋಜನಾ ಷರತ್ತುಗಳೊಂದಿಗೆ ಧನ ಸಹಾಯ ಲಭ್ಯವಿದೆ. ನಿಗದಿತ ನಮೂನೆಯ ಅರ್ಜಿಯ ಪ್ರತಿಗಳ ಸಹಿತ ಜಿಲ್ಲೆಯ ಕೃಷಿ ಭವನ ಮತ್ತು ಕೃಷಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಲಭ್ಯವಿದೆ. ಅರ್ಜಿಯೊಂದಿಗೆ ಅರ್ಜಿದಾರರ ಆಧಾರ್, ಬ್ಯಾಂಕ್ ಪಾಸ್ ಪುಸ್ತಕ, ಈ ವರ್ಷ ಪೂರ್ಣಗೊಳಿಸಿದ ಭೂ ಕಂದಾಯ ರಶೀದಿ ಮತ್ತು ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರಿಗೆ ಮಾತ್ರ) ಇತ್ಯಾದಿ ಪ್ರತಿಗಳನ್ನು ಸಲ್ಲಿಸಬೇಕು. ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು, ಕಾಸರಗೋಡು ಜಿಲ್ಲೆಯ ಕೃಷಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ, ಅಥವಾ ಸ್ಥಳೀಯ ಕೃಷಿ ಭವನದಲ್ಲಿ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 9895050917, 9048183643, 7736421546, ಇಮೇಲ್:ï:aeeagriksd@gmail.com




