ಕಾಸರಗೋಡು: ರಾಷ್ಟ್ರೀಯ ಆಯುಷ್ ಮಿಷನ್ ಜಿಲ್ಲೆಯಲ್ಲಿ ಮಲ್ಟಿ ಪರ್ಪಸ್ ವರ್ಕರ್ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 40 ವರ್ಷ ವಯೋಮಿತಿಯಾಗಿದ್ದು, ಜಿ.ಎನ್.ಎಂ ನಸಿರ್ಂಗ್ ವಿತ್ ಕೇರಳ ನಸಿರ್ಂಗ್ ಆಂಡ್ ಮಿಡ್‍ವೈಫ್ ಕೌನ್ಸಿಲ್ ನೋಂದಣಿ ಯಾ ಸಮಾನವಾದ ಅರ್ಹತೆಯಾಗಿದೆ. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಇರುವವರಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು. 15 ಸಾವಿರ ರೂ ವೇತನ ಲಭಿಸುವುದು. ಆಸಕ್ತ ಉದ್ಯೋಗಾರ್ಥಿಗಳು ವಯಸ್ಸು ಮತ್ತು ಅರ್ಹತೆಯನ್ನು ಸಾಬೀತುಪಡಿಸುವ ಪ್ರಮಾಣಪತ್ರಗಳ ಸ್ವಯಂ ದೃಢೀಕರಿಸಿದ ಪ್ರತಿಗಳ ಸಹಿತ ಜಿಲ್ಲಾ ಕಾರ್ಯಕ್ರಮ ನಿರ್ವಾಹಕರು, ರಾಷ್ಟ್ರೀಯ ಆಯುಷ್ ಮಿಷನ್, ಎರಡನೇ ಮಹಡಿ, ಜಿಲ್ಲಾ ಆಯುರ್ವೇದ ಆಸ್ಪತ್ರೆ, ಪಡನ್ನಕ್ಕಾಡು ಪಿ.ಒ., ಕಾಸರಗೋಡು 671314 ಎಂಬ ವಿಳಾಸಕ್ಕೆ ಜನವರಿ 28 ರಂದು ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಫಾರ್ಮನ್ನುhttps://nam.kerala.gov.in ಎಂಬ ವೆಬ್‍ಸೈಟ್ ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ(8848002953)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




