ಕಾಸರಗೋಡು: ಮಾಹಿತಿ ಹಕ್ಕುಗಳ ಸಂರಕ್ಷಕರಾಗಿ ಕೆಲಸ ಮಾಡುವ ರಾಜ್ಯದ ಉದ್ಯೋಗಸ್ಥರಿಗೆ ವಿಧಾನಸಭಾ ಮಂಡಲದ ಆಧಾರದಲ್ಲಿ ಮಾಹಿತಿ ಹಕ್ಕುಗಳಿಗೆ ಸಂಬಂಧಿಸಿದ ತರಗತಿಯನ್ನು ನೀಡಲಾಗುವುದು ಎಂದು ರಾಜ್ಯ ಮಾಹಿತಿ ಆಯೋಗದ ಅಧಿಕಾರಿ ಡಾ. ಎಂ ಶ್ರೀ ಕುಮಾರ್ ಹೇಳಿದರು.
ಕಾಸರಗೋಡು ಜಿಲ್ಲಾಧಿಕಾರಿ ಕಛೇರಿಯ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ನಡೆದ ಸಾಕ್ಷ್ಯ ಸಂಗ್ರಹದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಮಂಡಲಗಳ ಅಧಾರದಲ್ಲಿ ನಡೆಯುವ ತರಗತಿಯ ರಾಜ್ಯಮಟ್ಟದ ಉದ್ಘಾಟನೆಯನ್ನು ಕೈಗಾರಿಕಾ ಕಾನೂನು ಸಚಿವ ಪಿ. ರಾಜೀವ್ ಅವರು ಕಳಮಶ್ಶೇರಿಯಲ್ಲಿ ನೆರವೇರಿಸಿದರು. ಸಾಕ್ಷ್ಯ ಸಂಗ್ರಹದಂತೆ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಜನರಿಗೆ ಅರಿವು ತುಂಬಾ ಕಡಿಮೆಯಾಗಿದ್ದು, ಕಾಸರಗೋಡು ಜಿಲ್ಲೆಯ ಅಧಿಕಾರಿಗಳು ವಿಧಾನ ಮಂಡಲ ಮಟ್ಟದಲ್ಲಿ ನಡೆಯುವ ಮಾಹಿತಿ ಹಕ್ಕು ಕಾಯ್ದೆಯ ತರಗತಿಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಮಾಹಿತಿ ಆಯುಕ್ತರು ಹೇಳಿದರು.
ಜಿಲ್ಲೆಯಲ್ಲಿ ಮಾಹಿತಿ ಹಕ್ಕುಗಳಿಗೆ ಸಂಬಂಧಿಸಿ 2024 ವರೆಗೆ ದೊರೆತ ಎಲ್ಲಾ ದೂರುಗಳನ್ನು ಪರಿಹರಿಸಲಾಗಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಾಸರಗೋಡು ಜಿಲ್ಲೆಯಲ್ಲಿ ದೂರುಗಳು ಕಡಿಮೆ ಇದೆ. ಸಾಕ್ಷ್ಯ ಸಂಗ್ರಹಣೆಯಲ್ಲಿ 30 ದೂರುಗಳನ್ನು ಪರಿಗಣಿಸಲಾಗಿದೆ. 28 ದೂರುಗಳನ್ನು ಸಂಪೂರ್ಣವಾಗಿ ಪರಿಹರಿಸಲಾಗಿದೆ. ಎರಡು ದೂರುಗಳಿಗೆ ವಿವರಣೆ ಕೇಳಲಾಗಿದೆ ಎಮದವರು ಮಾಹಿತಿ ನೀಡಿದರು.




.jpeg)
