ಕಾಸರಗೋಡು: 'ರಸ್ತೆ ಸುರಕ್ಷಾ ಮಾಸಾಚರಣೆ-2025' ರ ಅಂಗವಾಗಿ ಕಾಸರಗೋಡು ಪ್ರಾದೇಶಿಕ ಸಾರಿಗೆ ಕಚೇರಿಯ ಆಶ್ರಯದಲ್ಲಿ ಚಾಲಕರಿಗೆ ತಿಳಿವಳಿಕಾ ತರಗತಿಗಳನ್ನು ಆಯೋಜಿಸಲಾಗಿದೆ. ಬಸ್ ಸಿಬ್ಬಂದಿಗಳಿಗಾಗಿ ಜನವರಿ 14 ರಂದು ಮಧ್ಯಾಹ್ನ 2.30 ಕ್ಕೆ ಕಾಸರಗೋಡು ಹೊಸ ಬಸ್ ನಿಲ್ದಾಣದ ಎದುರಿನ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ, ಜ.16 ರಂದು ಬೆಳಗ್ಗೆ 11ಕ್ಕೆ ಶಾಲಾ ಬಸ್ ಚಾಲಕರಿಗಾಗಿ ಚೆಮ್ನಾಡು ಜಮಾ ಅತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತರಗತಿ ನಡೆಯಲಿರುವುದು. ಟಿಪ್ಪರ್ ಲಾರಿ ಚಾಲಕರಿಗಾಗಿ ಜ. 16ರಂದು ಮಧ್ಯಾಹ್ನ 2.30ಕ್ಕೆ ಬದಿಯಡ್ಕ ಸಂಸ್ಕøತ ಭವನದಲ್ಲಿ, ಜ. 17ರಂದು ಮಧ್ಯಾಹ್ನ 2.30ಕ್ಕೆ ಆಟೋ-ಟ್ಯಾಕ್ಸಿ ಚಾಲಕರಿಗೆ ಬದಿಯಡ್ಕ ಸಂಸ್ಕೃತ ಭವನದಲ್ಲಿ ತರಗತಿಗಳು ನಡೆಯಲಿವೆ. ಎಲ್ಲಾ ಚಾಲಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಗುವುದು. ತರಗತಿಗಳಲ್ಲಿ ಭಾಗವಹಿಸುವ ಚಾಲಕರಿಗೆ ಆಯಾ ತರಗತಿಯಲ್ಲೇ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು ಎಂದು ಕಾಸರಗೋಡು ಪ್ರಾದೇಶಿಕ ಸರಿಗೆ ಇಲಾಖೆ ಅಧಿಕಾರಿ ಪ್ರಕಟಣೆ ತಿಳಿಸಿದೆ.

