ಎರ್ನಾಕುಳಂ: ಕೂತಟ್ಟುಕುಳಂ ನಗರಸಭೆಯ ಅವಿಶ್ವಾಸ ನಿರ್ಣಯ ಸಂಬಂಧ ಸ್ವತಃ ಪಕ್ಷದ ಸದಸ್ಯೆಯಾದ ಕಾರ್ಪೋರೇಟರನ್ನೇ ಅಪಹರಿಸಿದ ಘಟನೆ ನಿನ್ನೆ ನಡೆದಿದೆ. ಸದಸ್ಯೆಯ ಅಪಹರಣ ಘಟನೆಯಲ್ಲಿ ಸಿಪಿಎಂ-ಡಿವೈಎಫ್‍ಐ ಕಾರ್ಯಕರ್ತರ ವಿರುದ್ಧ ಗಂಭೀರ ಆರೋಪಗಳು ಬಹಿರಂಗಗೊಂಡಿವೆ.
ಸಿಪಿಎಂ ಕೌನ್ಸಿಲರ್ ಕಲಾ ರಾಜು ಅವರು ಪಕ್ಷದ ನಾಯಕರಿಂದ ಅಪಹರಿಸಲ್ಪಟ್ಟಿದ್ದಾರೆ ಎಂದು ಪ್ರತಿಕ್ರಿಯಿಸಿದರು. ತನ್ನ ಬಟ್ಟೆಗಳನ್ನು ಹರಿದು ಹಾಕಲಾಯಿತು, ವಾಹನದೊಳಗೆ ಎಳೆದೊಯ್ದರು ಮತ್ತು ಮಹಿಳೆ ಎಂಬ ಪರಿಗಣನೆಯನ್ನು ಸಹ ನೀಡಲಿಲ್ಲ ಎಂದು ಕಲಾ ರಾಜು ಆರೋಪಿಸಿದ್ದಾರೆ. ಡಿವೈಎಎಫ್‍ಐ ಕಾರ್ಯಕರ್ತೆಯಾದ ತನ್ನನ್ನೇÀ ಕಾಲು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದರು.
ಅಪಹರಣದ ನಂತರ, ಅವರನ್ನು ಸಿಪಿಎಂ ಪ್ರದೇಶ ಸಮಿತಿ ಕಚೇರಿಯಲ್ಲಿ ಕುಳ್ಳಿರಿರಿಸಲಾಗಿತ್ತು. ಎಲ್ಲವೂ ಪ್ರದೇಶ ಕಾರ್ಯದರ್ಶಿಯ ಅರಿವಿನಿಂದಲೇ ನಡೆದಿದೆ. ಮಹಿಳಾ ಕೌನ್ಸಿಲರ್ ತನ್ನಸ್ವಸ್ಥತೆಯನ್ನು ತಿಳಿಸಿದ ಬಳಿಕ , ಸಿಪಿಎಂ ಕಾರ್ಯಕರ್ತರು ಆಸ್ಪತ್ರೆಗೆ ಕರೆದೊಯ್ಯಲು ಸಹ ಸಿದ್ಧರಿರಲಿಲ್ಲ ಎಂದು ಹೇಳಿದರು. ಪಕ್ಷದ ಕಾರ್ಯಕರ್ತರಿಂದ ಬೇರೆ ಯಾವುದೇ ಕಿರುಕುಳವಾಗಿಲ್ಲ ಎಂದು ಕೌನ್ಸಿಲರ್ ಸ್ಪಷ್ಟ್ಟಪಡಿಸಿದರು ಮತ್ತು ಪಕ್ಷದ ಸದಸ್ಯರು ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸದಂತೆ ತಡೆಯಲು ಪ್ರಯತ್ನಿಸಿದರು ಎಂದು ಆರೋಪಿಸಿದರು.
ಅರುಣ್ ಅಶೋಕನ್ ಎಂಬ ಡಿವೈಎಫ್‍ಐ ಕಾರ್ಯಕರ್ತ ಅವರನ್ನು ವಾಹನಕ್ಕೆ ಎಳೆದೊಯ್ದರು. ಅವರ ಕಾಲು ಕಾರಿನ ಬಾಗಿಲಿನ ಕೆಳಗೆ ಸಿಲುಕಿಕೊಂಡಿತ್ತು ಎಂದು ತಿಳಿಸಿದಾಗ, ನಾವು ಅಲ್ಲಿಗೆ ಹೋದ ನಂತರ ಅದನ್ನು ಕತ್ತರಿಸುವುದಾಗಿ ಅವನು ಉತ್ತರಿಸಿದನು. ಕುತ್ತಿಗೆ ಹಿಡಿದು ವಾಹನದೊಳಗೆ ಕರೆದೊಯ್ಯಲಾಯಿತು. ನಂತರ, ನನಗೆ ಎದೆ ನೋವು ಬಂದಾಗ, ನನಗೆ ಗ್ಯಾಸ್ ಮಾತ್ರೆ ನೀಡಲಾಯಿತು. ತನಗೆ ಹೃದಯ ಸಮಸ್ಯೆ ಇದ್ದು ಆಸ್ಪತ್ರೆಗೆ ಹೋಗಬೇಕು ಎಂದು ಹೇಳಿದಾಗ, ಪಕ್ಷದ ಕಾರ್ಯಕರ್ತರು ಏರಿಯಾ ಕಾರ್ಯದರ್ಶಿಯನ್ನೇ ಕೇಳಬೇಕೆಂದು ಉತ್ತರಿಸಿದರು ಎಂದು ಕಲಾ ಹೇಳಿದರು. ಪಕ್ಷದಲ್ಲಿ ಮುಂದುವರಿಯಬೇಕೆ ಬೇಡವೇ ಎಂಬುದನ್ನು ಇನ್ನಷ್ಟೇ ಪರಿಗಣಿಸಿ ನಿರ್ಧರಿಸುತ್ತೇನೆ ಎಂಬುದು ಕಲಾ ಅವರು ತಿಳಿಸಿದ್ದಾರೆ.





