ನವದೆಹಲಿ: ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ₹ 3,985 ವೆಚ್ಚದಲ್ಲಿ ಮೂರನೇ ಲಾಂಚ್ ಪ್ಯಾಡ್ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಇಸ್ರೋದ ಮುಂದಿನ ತಲೆಮಾರಿನ ಉಡ್ಡಯನ ವಾಹನಗಳಿಗೆ ಮೂಲಸೌಕರ್ಯವನ್ನು ಒದಗಿಸಲು ಮತ್ತು ಶ್ರೀಹರಿಕೋಟಾದಲ್ಲಿನ ಎರಡನೇ ಉಡಾವಣಾ ಪ್ಯಾಡ್‌ಗೆ ಸ್ಟ್ಯಾಂಡ್‌ಬೈ ಪ್ಯಾಡ್ ಆಗಿ ಇದು ಕಾರ್ಯನಿರ್ವಹಿಸಲಿದೆ.




