ಕಾಸರಗೋಡು: ದೇಶದಲ್ಲಿ ಪರಿಶಿಷ್ಟ ಪಂಗಡ ಸೇರಿದಂತೆ ಹಿಂದುಳಿದ ಗುಂಪುಗಳನ್ನು ಸಮಾಜದ ಮುಖ್ಯ ಧಾರೆಗೆ ತರಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ ಎಂದು ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಹೇಳಿದರು.
ಅವರು ಕಾಸರಗೋಡು ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ದೇಶದಲ್ಲಿ ಆಂತರಿಕ ಮತ್ತು ಬಾಹ್ಯ ಭಯೋತ್ಪಾದನೆಯನ್ನು ಕಟ್ಟುನಿಟ್ಟಾಗಿ ನಿಗ್ರಹಿಸಬೇಕಾಗಿದೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದ್ದು, ನಮ್ಮ ದೇಶದ ಸಂವಿಧಾನ ನೀಡಿರುವ ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ಸಮಾಜವಾದದ ಮೌಲ್ಯಗಳನ್ನು ನಾವು ಉಳಿಸಿಕೊಳ್ಳುವುದರ ಜತೆಗೆ ಹಲವು ಸಂಸ್ಕøತಿ, ಭಾಷಾ ವೈವಿಧ್ಯತೆಯನ್ನು ಪೋಷಿಸಿಕೊಂಡು ಬರಬೇಕಾದ ಅನಿವಾರ್ಯತೆಯಿದೆ. ದೇಶ 200 ವರ್ಷಗಳ ಗುಲಾಮಗಿರಿಯಿಂದ ಮುಕ್ತವಾಗಿ ಬಹಳಷ್ಟು ದೂರ ಬರಲು ಸಾಧ್ಯವಾಯಿತು. ಅಭಿವೃದ್ಧಿಯ ಪಥದಲ್ಲಿ ನಾವು ಮತ್ತಷ್ಟು ಮುಂದಕ್ಕೆ ಸಾಗಬೇಕಾಗಿದೆ. ಇದಕ್ಕೆ ಪ್ರತಿಯೊಬ್ಬ ಭಾರತೀಯ ಕೈಜೋಡಿಸಬೇಕಾಗಿದೆ ಎಂದು ತಿಳಿಸಿದರು.
ಆಕರ್ಷಕ ಪಥಸಂಚಲನದಲ್ಲಿ 20 ತುಕಡಿಗಳು ಪಾಲ್ಗೊಂಡಿತ್ತು. ಹೆಚ್ಚುವರಿ ಎಸ್ಪಿ ಡಾ.ಒ.ಅಪರ್ಣಾ ಪರೇಡ್ ನೇತೃತ್ವ ವಹಿಸಿದ್ದರು. ಸೆಕೆಂಡ್ ಕಮಾಂಡರ್ ಆಗಿ ಕಾಸರಗೋಡು ಸ್ಪೆಷಲ್ ಬ್ರಾಂಚ್ ಸಬ್‍ಇನ್ಸ್ ಪೆಕ್ಟರ್ ಎಂ ಸದಾಶಿವನ್ ಪಥಸಂಚಲನ ಮುನ್ನಡೆಸಿದರು. ಪೆÇಲೀಸ್ ವಿಭಾಗದಲ್ಲಿ ಕಾಸರಗೋಡು ಜಿಲ್ಲಾ ಕೇಂದ್ರ, ಹಿರಿಯ ವಿಭಾಗದ ಎನ್‍ಸಿಸಿ ವಿಭಾಗದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜು, ಜೂನಿಯರ್ ವಿಭಾಗ ಎನ್‍ಸಿಸಿ ವಿಭಾಗ ಜಿಎಚ್‍ಎಸ್‍ಎಸ್ ಚೆಮ್ನಾಡ್, ಸ್ಟೂಡೆಂಟ್ ಪೆÇಲೀಸ್ ಕೆಡೆಟ್ ವಿಭಾಗ ಡಾ.ಅಂಬೇಡ್ಕರ್ ಜಿಎಚ್‍ಎಸ್‍ಎಸ್ ಕೋಡೋತ್, ಬ್ಯಾಂಡ್ ಪಾರ್ಟಿಯಲ್ಲಿ ಪೆರಿಯ ಜವಾಹರ್ ನವೋದಯ ವಿದ್ಯಾಲಯ, ಉಳಿಯತ್ತಡ್ಕ ಜಯಮಾತಾ ಆಂಗ್ಲ ಮಾಧ್ಯಮ ಶಾಲೆ ಬಹುಮಾನ ಗಳಿಸಿತು. ಸಚಿವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಸಮಾರಂಭದಲ್ಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ ನೆಲ್ಲಿಕುನ್ನು, ಸಿ.ಎಚ್ ಕುಞಂಬು, ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಎ.ಕೆ.ಎಂ ಅಶ್ರಫ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇಂಪಾಶೇಖರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಸ್ವಾತಂತ್ರ್ಯ ಹೋರಾಟಗಾರ ಕ್ಯಾಪ್ಟನ್ ಕೆ.ಎಂ.ಕೆ ನಂಬಿಯಾರ್, ಎಡಿಎಂ ಪಿ.ಅಖಿಲ್, ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೇಗಂ, ಆರ್‍ಡಿಓ ಪಿ.ಬಿನುಮೋನ್, ಇತರ ಜನಪ್ರತಿನಿಧಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.



