ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಉತ್ಕರ್ಷ್ ಒಡಿಶಾ - ಮೇಕ್ ಇನ್ ಒಡಿಶಾ ಕಾನ್ ಕ್ಲೇವ್ 2025 ಅನ್ನು ಭುವನೇಶ್ವರದ ಜನತಾ ಮೈದಾನದಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಜಿ, ಕೇಂದ್ರ ಕ್ಯಾಬಿನೆಟ್ ಮಂತ್ರಿಗಳು ಮತ್ತು ಭಾರತ ಮತ್ತು ವಿಶ್ವದಾದ್ಯಂತದ ಉದ್ಯಮಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ಆಯೋಜಿಸಲಾದ ಕೋಲ್ಡ್‌ಪ್ಲೇ ಸಂಗೀತ ಕಚೇರಿಯು ಅತ್ಯಂತ ಮನೋಹರವಾಗಿತ್ತು. ಇದು ಭಾರತದಲ್ಲಿ ಸಂಗೀತ ಕಚೇರಿಗಳಿಗೆ ಅಗಾಧ ಅವಕಾಶಗಳಿವೆ ಅನ್ನೋದನ್ನ ತೋರಿಸುತ್ತೆ. ಪ್ರಪಂಚದಾದ್ಯಂತದ ದೊಡ್ಡ ಕಲಾವಿದರು ಭಾರತದ ಕಡೆಗೆ ಆಕರ್ಷಿತವಾಗಿದ್ದಾರೆ. ಇದಕ್ಕೆ ಅಗತ್ಯವಿರುವ ಮೂಲಸೌಕರ್ಯ ಮತ್ತು ಕೌಶಲ್ಯಗಳ ಮೇಲೆ ರಾಜ್ಯ ಮತ್ತು ಖಾಸಗಿ ವಲಯವು ಗಮನಹರಿಸಬೇಕು ಎಂದಿದ್ದಾರೆ.
ಭಾರತದ ಆರ್ಥಿಕ ವಿಸ್ತರಣೆಯಲ್ಲಿ ಎರಡು ದೊಡ್ಡ ಬಳ ಅಂದ್ರೆ ನವೀನ ಸೇವಾ ವಲಯ ಮತ್ತು ಭಾರತದ ಗುಣಮಟ್ಟದ ಉತ್ಪನ್ನಗಳು. ಕೇವಲ ಕಚ್ಚಾ ವಸ್ತುಗಳ ರಫ್ತಿನ ಮೂಲಕ ಮಾತ್ರ ತ್ವರಿತ ಬೆಳವಣಿಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.




