HEALTH TIPS

ಗುಲಾಮರ ಮಕ್ಕಳಿಗೆ ಜನ್ಮದತ್ತ ಪೌರತ್ವ; ಅಮೆರಿಕಕ್ಕೆ ಬರುವ ಎಲ್ಲರಿಗೂ ಅಲ್ಲ: ಟ್ರಂಪ್

ವಾಷಿಂಗ್ಟನ್‌: 'ಜನ್ಮದತ್ತವಾಗಿ ಅಮೆರಿಕ ಪೌರತ್ವವನ್ನು ಹಿಂದೆ ನೀಡಿದ್ದು ಗುಲಾಮರ ಮಕ್ಕಳಿಗೇ ಹೊರತು, ಜಗತ್ತಿನ ಎಲ್ಲಾ ಮೂಲೆಗಳಿಂದ ದಂಡಿಯಾಗಿ ಬಂದು ನೆಲೆಸುವವರಿಗಲ್ಲ' ಎಂದು ಅಮೆರಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಜನ್ಮದತ್ತ ಪೌರತ್ವ ವಿರುದ್ಧ ಟ್ರಂಪ್ ಆದೇಶ ಹೊರಡಿಸಿದರು.

ಇದರ ಮರುದಿನವೇ ಸಿಯಾಟಲ್‌ನ ಫೆಡರಲ್ ನ್ಯಾಯಾಲಯ ಈ ಆದೇಶ ರದ್ದುಗೊಳಿಸಿತ್ತು. ಇದರ ವಿರುದ್ಧ ತಾನು ಮೇಲ್ಮನವಿ ಸಲ್ಲಿಸುತ್ತೇನೆ. ಸುಪ್ರೀಂ ಕೋರ್ಟ್‌ನ ಆದೇಶ ನನ್ನ ಪರವಾಗಿರಲಿದೆ ಎಂಬ ಭರವಸೆ ಇದೆ ಎಂದು ಟ್ರಂಪ್ ಹೇಳಿದ್ದಾರೆ.

'ಜನ್ಮದತ್ತವಾಗಿ ಪೌರತ್ವ ನೀಡುತ್ತಿದ್ದ ಕಾಲವನ್ನೊಮ್ಮೆ ಅವಲೋಕಿಸಿ. ದೇಶಕ್ಕೆ ಕರೆತಂದ ಗುಲಾಮರ ಮಕ್ಕಳಿಗಾಗಿ ನೀಡಿದ ಸೌಕರ್ಯವದು. ಹಾಗೆಂದ ಮಾತ್ರಕ್ಕೆ ಇಡೀ ಜಗತ್ತೇ ಅಮೆರಿಕದತ್ತ, ತಂಡೋಪತಂಡವಾಗಿ ಬಂದು ಇಲ್ಲಿಯೇ ಜಮಾವಣೆಗೊಳ್ಳಿ ಎಂದಲ್ಲ. ಅಮೆರಿಕಾಕ್ಕೆ ಎಲ್ಲರೂ ಬರುತ್ತಿದ್ದಾರೆ. ಬಹುತೇಕರು ಅನಕ್ಷರಸ್ಥರು. ಅವರ ಮಕ್ಕಳೂ ಅನಕ್ಷರಸ್ಥರು ಇದ್ದಾರೆ. ಆದರೆ ಪೌರತ್ವ ನೀಡುವ ಉದ್ದೇಶ ಇದಲ್ಲ' ಎಂದು ಶ್ವೇತಭವನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

'ಗುಲಾಮರಾಗಿ ಬಂದವರ ಮಕ್ಕಳಿಗೆ ಪೌರತ್ವ ನೀಡಿದ್ದು ಒಳ್ಳೆಯ ಹಾಗೂ ಉದಾತ್ತ ಕ್ರಮ. ನಾನು ಶೇ 100ರಷ್ಟು ಇದರ ಪರವಾಗಿದ್ದೇನೆ. ಹಾಗೆಂದ ಮಾತ್ರಕ್ಕೆ ಇಡೀ ಜಗತ್ತು ಅಮೆರಿಕದಲ್ಲಿ ಬಂದು ನೆಲೆಸುವುದನ್ನು ಒಪ್ಪುವುದಿಲ್ಲ. ಇವೆಲ್ಲವನ್ನೂ ಕೊನೆಗಾಣಿಸಲು ಸುಪ್ರೀಂ ಕೋರ್ಟ್‌ ಆದೇಶವನ್ನು ಎದುರು ನೋಡುತ್ತಿದ್ದೇನೆ. ಈ ಪ್ರಕರಣದಲ್ಲಿ ನಮಗೆ ಜಯ ಸಿಗಲಿದೆ ಎಂಬ ವಿಶ್ವಾಸವಿದೆ' ಎಂದು ಟ್ರಂಪ್ ಹೇಳಿದ್ದಾರೆ.

ಜನ್ಮದತ್ತವಾಗಿ ನೀಡಲಾಗುವ ಪೌರತ್ವ ರದ್ದುಪಡಿಸಬೇಕು. ಆ ಮೂಲಕ ಅಕ್ರಮ ವಲಸಿಗರನ್ನು ಮತ್ತು ತಾತ್ಕಾಲಿಕ ವಿಸಾ ಪಡೆದು ಅವಧಿ ನಂತರವೂ ಅಕ್ರಮವಾಗಿ ನೆಲೆಸಿರುವವರನ್ನು ದೇಶದಿಂದ ಹೊರಕ್ಕೆ ಕಳುಹಿಸಬೇಕು ಎಂಬ ಮಸೂದೆಯೊಂದನ್ನು ರಿಪಬ್ಲಿಕನ್ ಪಕ್ಷದ ಸಂಸದರೊಬ್ಬರು ಕಳೆದ ವಾರ ಮಂಡಿಸಿದ್ದರು.

ಜನ್ಮದತ್ತವಾಗಿ ನೀಡಲಾಗುವ ಪೌರತ್ವವನ್ನು ಅಮೆರಿಕ ಸೇರಿದಂತೆ ಜಗತ್ತಿನ 33 ರಾಷ್ಟ್ರಗಳು ನೀಡುತ್ತಿವೆ. ವಸಲೆ ಅಧ್ಯಯನ ಕೇಂದ್ರವು 2023ರಲ್ಲಿ ನಡೆಸ ಸಮೀಕ್ಷೆಯ ಪ್ರಕಾರ 2.25ಲಕ್ಷದಿಂದ 2.50 ಲಕ್ಷದಷ್ಟು ಪೌರತ್ವವನ್ನು ಅಕ್ರಮವಾಗಿ ವಲಸೆ ಬಂದವರ ಮಕ್ಕಳಿಗೆ ಅಮೆರಿಕ ವಿತರಿಸಿದೆ. ಈ ಪ್ರಮಾಣವು ಅಮೆರಿಕದಲ್ಲಿ ಒಟ್ಟು ಜನಿಸುವ ಮಕ್ಕಳ ಶೇ 7ರಷ್ಟಾಗಿದೆ.

2025ರ ಜನ್ಮದತ್ತವಾಗಿ ನೀಡಲಾಗುವ ಪೌರತ್ವ ಕಾಯ್ದೆ ಅನ್ವಯ ಜನಿಸುವ ಮಗುವಿನ ಪಾಲಕರಲ್ಲೊಬ್ಬರು ಅಮೆರಿಕದ ನಾಗರಿಕರಾಗಿರಬೇಕು, ಕಾಯಂ ವಾಸ ಹೊಂದಿರಬೇಕು ಅಥವಾ ಹೊರಗಿನವರಾದರೂ ಸೇನೆಯಲ್ಲಿ ಕೆಲಸ ಮಾಡುತ್ತಿರಬೇಕು ಎಂದೆನ್ನಲಾಗಿದೆ. ಈ ಕಾಯ್ದೆ ಶಾಸನವಾದ ದಿನದ ನಂತರದಲ್ಲಿ ಜನಿಸಿದ ಮಕ್ಕಳಿಗೆ ಅನ್ವಯಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries