ಕುಂಬಳೆ: ನಾರಾಯಣಮಂಗಲ ಸಮೀಪದ ಕಾನಮಠ ಶ್ರೀಶಂಕರನಾರಾಯಣ ದೇವರ ಮಠದಲ್ಲಿ ವಾರ್ಷಿಕ ಹೊಸ್ತಿನ ದೇವಕಾರ್ಯ ಹಾಗೂ ಶ್ರೀಧೂಮಾವತಿ ದೈವದ ಕೋಲ ನಾಳೆ ಹಾಗೂ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇಂದು(ಶುಕ್ರವಾರ) ಬೆಳಿಗ್ಗೆ 7 ಕ್ಕೆ ಶ್ರೀಧೂಮಾವತಿ ದೈವ ಸನ್ನಿಧಿಯಲ್ಲಿ ಆಚಾರ್ಯರಿಂದ ಪಂಚಗವ್ಯ ಹವನ, ಕಲಶಾಭಿಷೇಕ, ಶ್ರೀಶಂಕರನಾರಾಯಣ ದೇವರ ಸನ್ನಿಧಿಯಲ್ಲಿ ಬೆಳಿಗ್ಗೆ 10 ಕ್ಕೆ ಕೊಪ್ಪರಿಗೆ ಮುಹೂರ್ತ ನೆರವೇರಿತು. ರಾತ್ರಿ 8 ರಿಂದ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯವರಿಂದ ಯಕ್ಷಗಾನ ಬಯಲಾಟ ನಡೆಯಿತು.
ನಾಳೆ(ಶನಿವಾರ) ಬೆಳಿಗ್ಗೆ 6.30ಕ್ಕೆ ಆಚಾರ್ಯರಿಂದ ಗಣಪತಿ ಹವನ, ಪಂಚಗವ್ಯ ಹವನ, ನವಕಾಭಿಷೇಕ, 8 ಕ್ಕೆ ಸಾಮೂಹಿಕ ರುದ್ರ ಪಾರಾಯಣ, 10.30ರಿಂದ ತುಲಾಭಾರ ಸೇವೆ, 11 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ದೇವಕಾರ್ಯ, ಅನ್ನಸಂತರ್ಪಣೆ, ಸಂಜೆ 7.30ಕ್ಕೆ ಭಂಡಾರ ಕೊಟ್ಟಗೆಯಿಂದ ಶ್ರೀಧೂಮಾವತಿ ದೈವದ ಭಂಡಾರ ಹೊರಟು ದೈವಸ್ಥಾನದಲ್ಲಿ ತಂಬಲ ಮುಗಿಸಿ ಶ್ರೀಶಂಕರನಾರಾಯಣ ದೇವರ ಮಠಕ್ಕೆ ಆಗಮನ, ಮಹಾಪೂಜೆ, ಶ್ರೀಧೂಮಾವತಿ ದೈವದ ತೊಡಂಙಲ್ ನಡೆಯಲಿದೆ. ಜ.26 ರಂದು ಭಾನುವಾರ ಬೆಳಿಗ್ಗೆ 9.30ಕ್ಕೆ ಶ್ರೀಧೂಮಾವತಿ ದೈವದ ಕೋಲ, ಪ್ರಸಾದ ವಿತರಣೆ ನಡೆಯಲಿದೆ.





.jpg)
.jpg)
