ಕುಂಬಳೆ: ಮಂಗಳೂರು–ಕಾಸರಗೋಡು ಮಧ್ಯೆ ಸಂಚರಿಸುವ ಕೇರಳ ಕೆ.ಎಸ್.ಆರ್.ಟಿ.ಸಿ ಬಸ್ ಟಿಕೆಟ್ ದರ ಏರಿಕೆ ಹಿಂತೆಗೆಯಬೇಕೆಂದು ಒತ್ತಾಯಿಸಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರು ಕೇರಳ ಸಾರಿಗೆ ಸಚಿವ ಆರ್.ಗಣೇಶ್ ಕುಮಾರ್ ಅವರನ್ನು ತಿರುವನಂತಪುರ ವಿಧಾನಸೌಧದಲ್ಲಿ ಮುಖತಾ ಭೇಟಿಯಾಗಿ ಮನವಿ ಸಲ್ಲಿಸಿದರು.
ಕರ್ನಾಟಕ ಸಾರಿಗೆಯ ಬಸ್ ಗಳಲ್ಲಿ 15 ಶೇ.ಟಿಕೆಟ್ ದರ ಹೆಚ್ಚಿಸಿದ ಬೆನ್ನಲ್ಲೇ ಕೇರಳ ಕೆ.ಎಸ್.ಆರ್.ಟಿ.ಸಿ.ಯಲ್ಲೂ ದರ ಹೆಚ್ಚಿಸಿ, ಕಾಸರಗೋಡು, ಮಂಜೇಶ್ವರ ನಿವಾಸಿಗಳಿಗೆ ಪ್ರಯಾಣ ವೆಚ್ಚದ ಹೊರೆ ಹೊರಿಸಿರುವುದನ್ನು ಕೂಡಲೇ ಹಿಂತೆಗೆಯಬೇಕೆಂದು ಅವರು ವಿನಂತಿಯಲ್ಲಿ ಆಗ್ರಹಿಸಿದ್ದಾರೆ.
ಕಾಸರಗೋಡು–ಮಂಗಳೂರು ನಡುವೆ ದೈನಂದಿನ ಶಿಕ್ಷಣ, ಚಿಕಿತ್ಸೆ, ಉದ್ಯೋಗ, ವ್ಯವಹಾರಕ್ಕಾಗಿ ಸಾವಿರಾರು ಮಂದಿ ಅಂತರಾಜ್ಯ ಪ್ರಯಾಣಿಸುತ್ತಿದ್ದು, ಅವರಿಗೆ ಟಿಕೆಟ್ ದರ ಹೆಚ್ಚುವರಿ ಆರ್ಥಿಕ ಹೊರೆ ನೀಡಿದೆಯೆಂದೂ, ಹೆಚ್ಚಿಸಿದ ಟಿಕೆಟ್ ದರ ಹಿಂತೆಗೆದು ಜನಸಾಮಾನ್ಯರ ಸಂಕಷ್ಟ ಪರಿಹರಿಸಬೇಕೆಂದೂ ಅವರು ಸಚಿವರೊಡನೆ ವಿನಂತಿಸಿದರು.

.jpg)
