ಕಾಸರಗೋಡು: 2024-25ನೇ ಹಣಕಾಸು ವರ್ಷದಲ್ಲಿ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಜಾರಿಗೊಳಿಸುವ ವಿವಿಧ ಸ್ವ-ಉದ್ಯೋಗ ಯೋಜನೆಗಳಿಗೆ ಉದ್ಯೋಗ ನೋಂದಣಿ ಮಾಡಿಸಿಕೊಂಡವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷ ರೂ. ವರೆಗೆ ಇರುವ 21 ರಿಂದ 50 ವರ್ಷದೊಳಗಿನ ಜನರಿಗೆ ಸ್ವ-ಉದ್ಯೋಗ ಪ್ರಾರಂಭಿಸಲು ಬ್ಯಾಂಕ್‍ಗಳ ಮೂಲಕ 1 ಲಕ್ಷ ರೂ.ಗಳವರೆಗೆ ಸಾಲ ಮತ್ತು 20,000 ರೂ.ಗಳ ವರೆಗೆ ಸಬ್ಸಿಡಿಯನ್ನು ಕೆ.ಇ.ಎಸ್.ಆರ್.ಯು ಸ್ವ-ಉದ್ಯೋಗ ಯೋಜನೆ ನೀಡುತ್ತದೆ. ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷದ ವರೆಗೆ ಇರುವ ಮತ್ತು 21 ರಿಂದ 45 ರ ಮದ್ಯೆ ಪ್ರಾಯವಿರುವ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳಿಗೆ ಜಂಟಿ ಉದ್ಯಮ, ಪ್ರಾರಂಭಿಸಲು ಬ್ಯಾಂಕ್ ಗಳ ಮೂಲಕ ಹತ್ತು ಲಕ್ಷದವರೆಗೆ ಸಾಲವನ್ನೂ, 2 ಲಕ್ಷ ರೂ.ಗಳವರೆಗೆ ಸಬ್ಸಿಡಿ ನೀಡುವ ಬಹುಪಯೋಗಿ ಉದ್ಯೋಗ ಸಂಘ ಸ್ವ-ಉದ್ಯೋಗ ಯೋಜನೆ, ಕುಟುಂಬದ ವಾರ್ಷಿಕ ಆದಾಯ 1 ಲಕ್ಷ ರೂ.ವರೆಗಿದ್ದು 50 ರಿಂದ 65 ವರ್ಷದೊಳಗಿನವರಿಗೆ ಸ್ವಉದ್ಯೋಗ ಪ್ರಾರಂಭಿಸಲು ಬ್ಯಾಂಕ್ ಗಳ ಮೂಲಕ 50,000 ರೂಪಾಯಿಗಳ ವರೆಗೆ ಸಾಲವನ್ನೂ 12,500 ರೂಪಾಯಿಗಳ ತನ್ನ ಸಹಾಯಧನವನ್ನು ನೀಡುವ ನವಜೀವನ ಸ್ವ-ಉದ್ಯೋಗ ಯೋಜನೆ, ವ್ಯವಹಾರವನ್ನು ಪ್ರಾರಂಭಿಸಲು ವಿಧವೆಯರು, ಕಾನೂನುಬದ್ಧವಾಗಿ ವಿವಾಹವ್ವಿಚ್ಛೇದನ ಪಡೆದವರು, ಗಂಡನಿಂದ ತ್ಯಜಿಸಲ್ಪಟ್ಟವರು, ಗಂಡ ಕಾಣೆಯಾದವರು. ಪರಿಶಿಷ್ಟ ಜಾತಿಯ ಅವಿವಾಹಿತ ತಾಯಂದಿರು, 30 ವರ್ಷಕ್ಕಿಂತ ಮೇಲ್ಪಟ್ಟ ಅವಿವಾಹಿತ ವ್ಯಕ್ತಿಗಳು, ಹಾಸಿಗೆ ಹಿಡಿದ ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ಗಂಡಂದಿರನ್ನು ಹೊಂದಿರುವ ವಿಭಾಗಕ್ಕೆ ಸೇರಿದ. ಕುಟುಂಬದ ವಾರ್ಷಿಕ ಆದಾಯ 2 ಲಕ್ಷದವರೆಗೆ ಇರುವ 18 ರಿಂದ 55 ವರ್ಷದೊಳಗಿನ, ಮಹಿಳೆಯರಿಗೆ ಸ್ವ ಉದ್ಯೋಗ ಆರಂಭಿಸಲು 50 ಸಾವಿರ ರೂ. ಬಡ್ಡಿರಹಿತ ಸಾಲ ಮತ್ತು 25 ಸಾವಿರ ರೂ. ಸಬ್ಸಿಡಿ ನೀಡುವ ಶರಣ್ಯ ಸ್ವ ಉದ್ಯೋಗ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ನಮೂನೆಗೆ www.employment.kerala.gov.in ವೆಬ್‍ಸೈಟ್‍ನಲ್ಲಿ ಮತ್ತು ಉದ್ಯೋಗ ವಿನಿಮಯ ಕೇಂದ್ರದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ನಗರ ಉದ್ಯೋಗ ವಿನಿಮಯ ಕೇಂದ್ರ, ಹೊಸದುರ್ಗ - 04672209068, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕಾಸರಗೋಡು - 04994255582 ನ್ನು ಸಂಪರ್ಕಿಸಲು ಸೂಚಿಸಲಾಗಿದೆ.

